ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ನಾಗರಾಜು ಮನೆಗೆ ಅಧಿಕಾರಿಗಳು ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊರಟಗೆರೆ, ಮೇ 18-ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಜೆಟ್ಟಿ ಅಗ್ರಹಾರ ಗ್ರಾಮದ ನಾಗರಾಜು ಅವರ ಮನೆ ಮತ್ತು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ತುಮಕೂರು ಡಿಸಿಆರ್‍ಇ ವಿಭಾಗದ ಇನ್ಸ್‍ಪೆಕ್ಟರ್ ವೆಂಕಟರಮಣಪ್ಪ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ತೆರವು ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ನಾಗರಾಜು ಭೇಟಿ ನೀಡಿದ ವೇಳೆ ತಿಳಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ವಿರುದ್ದ ನಾಗರಾಜು ಮತ್ತೊಂದು ಬೆಂಚಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಕೊಂಡಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ ಎಂದು ಹೇಳಿದರು.

ನಾವು ನ್ಯಾಯಾಲದ ಆದೇಶವನ್ನು ಪಾಲಿಸುತ್ತಿದ್ದೇವೆ. ತೆರವು ಕಾರ್ಯಚರಣೆ ನಡೆಸದಂತೆ ತಡೆಯಾಜ್ಞಾ ಇದ್ದರೇ ನಾಗರಾಜು ನೀಡಲಿ ಅದನ್ನು ನಾವು ಪರಿಗಣಿಸುತ್ತೇವೆ. ಕಾನೂನನ್ನು ಪಾಲಿಸುವುದಷ್ಟೇ ನನ್ನ ಕರ್ತವ್ಯ. ಈಗ ನಾಗರಾಜುಗೆ ಕಾಲಾವಕಾಶ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ ಎಂದು ಕೊರಟಗೆರೆ ತಹಶೀಲ್ದಾರ್ ಶಿವರಾಜು ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಲಯದ ಆದೇಶವಿದೆ ಎಂದು ಏಕಾಏಕಿ ನನಗೆ ಜಾಗ ಕಾಲಿ ಮಾಡಲು ತಹಶೀಲ್ದಾರ್ ಹೇಳಿದ್ದಾರೆ. ವಿವಾದಿತ ಜಮೀನು ಇರೋದು 3ಎಕರೆ 15ಗುಂಟೆ ಮಾತ್ರ. ಉಳಿದ 31ಗುಂಟೆ ನಮ್ಮ ತಂದೆಯ ಹೆಸರಿನಲ್ಲಿ ಇದೆ. ಜಮೀನಿನಲ್ಲಿ ನನ್ನ ಮನೆಯಿದೆ.

ಇಲ್ಲಿ ನಮಗೆ ಇರಲು ಅವಕಾಶ ನೀಡಬೇಕು. ಇಲ್ಲವಾದರೇ ನಮಗೆ ದಯಾಮರಣ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ಜೆಟ್ಟಿ ಅಗ್ರಹಾರದ ನಾಗರಾಜು ಹಾಗೂ ಅವರ ಕುಟುಂಬ ಮನವಿ ಮಾಡಿದೆ.

Facebook Comments