ದರಖಾಸ್ತು ಸಾಗುವಳಿದಾರರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

kagodu
ಬೆಂಗಳೂರು, ಸೆ.19- ಇದುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವ ದರಖಾಸ್ತು ಸಾಗುವಳಿದಾರರಿಗೆ ಮತ್ತೊಮ್ಮೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಗರ್‌ಹುಕುಂ ಸಮಿತಿ ಮುಂದೆ ಈಗಾಗಲೇ ಸುಮಾರು 4 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಸಮಿತಿ ಅಧ್ಯಕ್ಷರಾದ ಸ್ಥಳೀಯ ಶಾಸಕರು ಬಾರದಿದ್ದರೂ ತಹಶೀಲ್ದಾರ್ ಅವರು ಕೋರಂ ಆಧಾರದ ಮೇಲೆ ಸಮಿತಿ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಲು ಸುತ್ತೋಲೆ ಹೊರಡಿಸಲಾಗಿದೆ ಎಂದರು.

ಪ್ರತಿ ವಾರ ಬಗರ್‌ಹುಕುಂ ಸಮಿತಿ ಸಭೆ ಕರೆಯಬೇಕು, ವಿಲೇವಾರಿ ಆದ ಅರ್ಜಿಗಳ ವರದಿಯನ್ನು ಪ್ರತಿ ತಿಂಗಳು ತಾಲೂಕುವಾರು ನೀಡಬೇಕು, ಇಲ್ಲದಿದ್ದರೆ ತಹಶೀಲ್ದಾರ್ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ದರಖಾಸ್ತು ಭೂಮಿ ಸಾಗುವಳಿ ಮಾಡುತ್ತಿರುವ ಹಲವು ರೈತರು ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವ ಬಗ್ಗೆ ಮನವಿ ಮಾಡಿದ್ದಾರೆ. ಇದನ್ನು ಪರಿಶೀಲಿಸಿ ಮತ್ತೊಮ್ಮೆ ದರಖಾಸ್ತು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಅರಣ್ಯ ಹಕ್ಕು ಸಮಿತಿ ಮೂಲಕ ಹಕ್ಕು ಪತ್ರ ನೀಡುವ ಬಗ್ಗೆ ಹೊಸದಾಗಿ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸ ಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ರಾಜ್ಯದ ದಕ್ಷಿಣ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸೆ.28 ರಂದು ಬರಕ್ಕೆ ಸಂಬಂಸಿದಂತೆ ಸಂಪುಟ ಉಪಸಮಿತಿ ಸಭೆ ನಡೆಯ ಲಿದೆ. ಅದರಲ್ಲಿ ಬರಪೀಡಿತ ಪ್ರದೇಶಗಳ ಆಯ್ಕೆ ಮಾಡಿ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಅಪೋಲೋ ಆಸ್ಪತ್ರೆ ಸರ್ಕಾರದ ವಶಕ್ಕೆ: ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಾಣವಾಗಿದ್ದ ಅಪೋಲೋ ಆಸ್ಪತ್ರೆಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಇದನ್ನು ಯಾರಿಗೆ ಹಸ್ತಾಂತರಿಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಬೇಕಿದೆ ಎಂದರು.  ಇದಕ್ಕೂ ಮುನ್ನ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಾಚನೂರು ಹಾಗೂ ಹುರುಗಾಲ ಜಂಬಗಿ ಗ್ರಾಮದ ರೈತ ಮಹಿಳೆ ಯರು, ರೈತರು ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಸಾಗುವಳಿ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಮುಧೋಳ ತಹಶೀಲ್ದಾರರಿಗೆ ದೂರವಾಣಿ ಮೂಲಕ ಮಾತನಾಡಿ, ಎರಡೂ ಗ್ರಾಮದ ರೈತರ ಅರ್ಜಿ ಸ್ವೀಕರಿಸುವಂತೆ ಸೂಚಿಸಿದರು.  ಕಂದಾಯ ಇಲಾಖೆ ಹಾಗೂ ರೈತರ ಭೂಮಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಅರವಿಂದ್ ಜಾದವ್ ಭೂ ಪ್ರಕರಣ ಲೋಪ ಕಂಡು ಬಂದಿಲ್ಲ :
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್ ಅವರ ಮೇಲೆ ಆರೋಪ ಕೇಳಿ ಬಂದ ಭೂಕಬಳಿಕೆ ಪ್ರಕರಣದಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಅರವಿಂದ್‌ಜಾದವ್ ಅವರ ತಾಯಿ ತಾರಾ ಬಾಯಿ ಅವರ ಹೆಸರಿನಲ್ಲಿ ಭೂ ಖರೀದಿ ವ್ಯವಹಾರ ಕಾನೂನು ಬದ್ಧವಾಗಿದೆ. ಯಾವುದೇ ಪರಿಶಿಷ್ಟ ಜಾತಿಯವರ ಜಮೀನು ಖರೀದಿಸಲ್ಲ. ಆದರೂ ಮತ್ತೊಮ್ಮೆ ಆ ಜಮೀನನ್ನು ಸರ್ವೆ ಮಾಡಲು ಆದೇಶಿಸಲಾಗಿದೆ ಎಂದರು. ಮೇಲ್ನೊಟಕ್ಕೆ ಜಮೀನು ಖರೀದಿ ಮಾಡುವಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ. ನಮಗೆ ಸಿಕ್ಕಿರುವ ದಾಖಲೆಗಳ ಪ್ರಕಾರ ಎಲ್ಲವೂ ಸರಿಯಿದೆ. ಮತ್ತಷ್ಟು ದಾಖಲೆಗಳ ಅಗತ್ಯವಿದ್ದು, ಮರು ಸರ್ವೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈಗಲ್‌ಟನ್ ರೆಸಾರ್ಟ್ 998 ಕೋಟಿ ರೂ  ಪಾವತಿಸಲು ಸೂಚನೆ : ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ಈಗಲ್‌ಟನ್ ರೆಸಾರ್ಟ್ 998 ಕೋಟಿ ರೂ. ಸರ್ಕಾರಕ್ಕೆ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಈಗಲ್‌ಟನ್ ರೆಸಾರ್ಟ್ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದು, 28 ಎಕರೆ ಜಮೀನನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ 77 ಎಕರೆಗೆ ತಕ್ಷಣ 998 ಕೋಟಿ ರೂ. ಹಣ ಪಾವತಿಸಲು ಸೂಚಿಸಲಾಗಿದೆ. ಹಣ ನೀಡದಿದ್ದರೆ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಿದೆ. ಈಗಲ್‌ಟನ್ ಪಾವತಿಸುವ ಹಣದಿಂದ ವರ್ತುಲ ರಸ್ತೆ, ಮೇಲ್ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸ ಲಾಗಿದೆ ಎಂದರು. ಗ್ರಾಮ ಲೆಕ್ಕಾಕಾರಿ ಹೊಣೆ: ಸರ್ಕಾರಿ ಭೂಮಿ ಒತ್ತುವರಿ ಯಾದರೆ ಗ್ರಾಮ ಲೆಕ್ಕಾಕಾರಿ ಹಾಗೂ ಕಂದಾಯ ವೃತ್ತ ನಿರೀಕ್ಷಕ ರನ್ನು ಹೊಣೆಗಾರರನ್ನಾಗಿ ಮಾಡ ಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆಯ ಆಡಳಿತ ಹದಗೆಟ್ಟಿರುವುದರಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಇನ್ನು ಮುಂದೆ ಗ್ರಾಮ ಲೆಕ್ಕಾಕಾರಿ ಗಳು ಮತ್ತು ಕಂದಾಯ ವೃತ್ತ ನಿರೀಕ್ಷಕರು ಆಯಾ ಗ್ರಾಮದಲ್ಲೇ ವಾಸ ಮಾಡಬೇಕು. ಅದಕ್ಕಾಗಿ ವಸತಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಈಗಾಗಲೇ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಗುರು ತಿಸಿ ತೆರವುಗೊಳಿಸಿರುವ ಪ್ರಮಾಣ ಹಾಗೂ ತೆರವುಗೊಳಿಸದೆ ಬಾಕಿ ಇರುವ ಪ್ರಕರಣದ ವರದಿ ನೀಡಲು ಕಂದಾಯ ಅಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಪ್ರತಿಯೊಬ್ಬ ಗ್ರಾಮ ಲೆಕ್ಕಾಕಾರಿ ಆಯಾ ಗ್ರಾಮದ ಜಮೀನನ್ನು ಪರಿಶೀಲಿಸಿ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ನಮೂದಿಸಲು ಕಡ್ಡಾಯಗೊಳಿಸಲಾಗುವುದು ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin