ದರೋಡೆಕೋರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

kunigal

ಕುಣಿಗಲ್, ಅ.4- ಲಾರಿ ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್‍ಗೆ ಚಾಕು ತೋರಿಸಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದ ಐವರು ದರೋಡೆಕೋರರನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ರಫಿ ಅಲಿಯಾಸ್ ರಫೀಕ್ ಖಾನ್ (34), ಮುರಾಸೀರ್ (26), ಮಜರ್ ಅಲಿಯಾಸ್ ಮಜರುಲ್ಲಾ ಖಾನ್ (27), ತ್ಯಾಂಕ್‍ಪಾಷ (22) ಹಾಗೂ ಅಜಂ ಅಲಿಯಾಸ್ ಅಜಂ ಪಾಷ (24) ಬಂಧಿತ ಆರೋಪಿಗಳು.

ಆಗಸ್ಟ್ 4ರಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ತಾಲೂಕಿನ ಕಸಬಾ ಹೋಬಳಿಯ ಗವಿಮಠದ ರಾಷ್ಟ್ರೀಯ ಹೆದ್ದಾರಿ-33ರ ಗಿರಿಗೌಡನ ಪಾಳ್ಯದ ಗೇಟ್ ಬಳಿ ಆಂಧ್ರ ಪ್ರದೇಶದ ರಾಮಾಂಜನೇಯಲು ಎಂಬುವರಿಗೆ ಸೇರಿದ್ದ ಗ್ರಾನೈಟ್ ಹಾಗೂ ಸ್ಲ್ಯಾಬ್‍ಗಳನ್ನು ಲಾರಿಯಲ್ಲಿ ತುಂಬಿಕೊಂಡು ಕೇರಳಕ್ಕೆ ಹೋಗುತ್ತಿರುವಾಗ ಇಂಡಿಕಾ ಕಾರಿನಲ್ಲಿ ಬಂದ ಐವರು ದರೋಡೆಕೋರರು ಚಾಲಕ ಹಾಗೂ ಕ್ಲೀನರ್‍ನನ್ನು ಚಾಕುವಿನಿಂದ ಬೆದರಿಸಿ 5 ಸಾವಿರ ರೂ. ನಗದು, 1 ಮೊಬೈಲ್ ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕ ಕಾರ್ತಿಕ್‍ರೆಡ್ಡಿ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಚಂದ್ರಶೇಖರ್, ಸಿಪಿಐ ಬಾಳೇಗೌಡ, ಪಿಎಸ್‍ಐ ಕೇಶವಮೂರ್ತಿ ಮತ್ತು ಸಿಬ್ಬಂದಿಗಳ ತಂಡ ರಚಿಸಿ ದರೋಡೆಕೋರರ ಪತ್ತೆಗಾಗಿ ಬಲೆ ಬೀಸಿದ್ದರು. ಅಂತಿಮವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin