ದರೋಡೆಗೆ ಸಜ್ಜಾಗಿದ್ದ ರಾಬರಿ ಗಿರಿ ಸೇರಿ 6 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

6-Arrestexd

ಬೆಂಗಳೂರು, ಮಾ.10- ಕಾರಿನಲ್ಲಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ದರೋಡೆ ಮಾಡಲು ಸಜ್ಜಾಗಿದ್ದ ರೌಡಿ ರಾಬರಿ ಗಿರಿ ಸೇರಿದಂತೆ ಆರು ಮಂದಿ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಶಿವಕುಮಾರ್ ಅಲಿಯಾಸ್ ಶಿವ (29), ಗಿರೀಶ್ ಅಲಿಯಾಸ್ ರಾಬರಿ ಗಿರಿ (36), ತಿಮ್ಮೇಶ (36), ಪ್ರದೀಪ್ (33), ನವೀನ್ (28) ಮತ್ತು ನಾಗರಾಜ್ (27) ಬಂಧಿತರು.  ಆರೋಪಿಗಳಿಂದ 10 ಮೊಬೈಲ್ ಹಾಗೂ ಮಾರಕಾಸ್ತ್ರಗಳು ಮತ್ತು ಇನ್ನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.  ಗಂಗಮ್ಮನಗುಡಿ ವ್ಯಾಪ್ತಿಯ ಅಬ್ಬಿಗೆರೆಯ ಕೆಇಬಿ ಕಚೇರಿ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಆರು ಮಂದಿ ದರೋಡೆಕೋರರು ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ಆರೂ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿ ಗಿರೀಶ್ ಅಲಿಯಾಸ್ ರಾಬರಿ ಗಿರಿ ಯಶವಂತಪುರ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಈತನ ವಿರುದ್ಧ ಮೂರು ಕೊಲೆ, ಒಂದು ಕೊಲೆಯತ್ನ, ಅಪಹರಣ, ಸುಲಿಗೆ, ನಾಲ್ಕು ದರೋಡೆಗೆ ಹೊಂಚು, ಒಂದು ಕೊಲೆ ಬೆದರಿಕೆ, ಮೂರು ಹಲ್ಲೆ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಆರೋಪಿಗಳ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಉಪ ಪೊಲೀಸ್ ಆಯುಕ್ತ ಕೌಶಲೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಎಸಿಪಿ ಜಯಮಾರುತಿ ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin