ದರ್ಪ ತೋರಿಸಿದ ಗ್ರಾ.ಪಂ ಸದಸ್ಯೆಯ ಪತಿಗೆ ಬಿತ್ತು ಗೂಸಾ

ಈ ಸುದ್ದಿಯನ್ನು ಶೇರ್ ಮಾಡಿ

Protest--01

ತುಮಕೂರು, ಜು.14- ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯೊಬ್ಬರು ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮುಂದೆ ದರ್ಪ ತೋರಲು ಹೋಗಿ ಹಿಗ್ಗಾಮುಗ್ಗಾ ಥಳಿಸಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿಯಲ್ಲಿ ನಡೆದಿದೆ. ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಳ್ಳುತ್ತಾರೆ ಎಂಬ ಗಾದೆ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯೆ ಪತಿಯ ಪರಿಸ್ಥಿತಿಯಾಗಿದೆ. ಸುಮ್ಮನಿರಲಾರದೆ ಜನರನ್ನು ಕೆಣಕಿ ಹಿಗ್ಗಾಮುಗ್ಗ ಒದೆ ತಿಂದಿದ್ದಾರೆ. ಪಂಚಾಯಿತಿ ಕಚೇರಿಯಲ್ಲಿಯೇ ಸದಸ್ಯೆಯ ಪತಿ ಮಹಾಶಯನಿಗೆ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ.

ಹೊನ್ನಾರಹಳ್ಳಿ ಗ್ರಾಮಸ್ಥರು ಪಂಚಾಯಿತಿ ಆವರಣದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಸದಸ್ಯೆ ಜಯಮ್ಮ ಪತಿ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬಾರದು. ಜನರೆಲ್ಲ ನನ್ನ ಹಿಡಿತದಲ್ಲಿದ್ದಾರೆ ಎಂಬ ಉದ್ದೇಶದಿಂದ ದರ್ಪ ತೋರಲು ಮುಂದಾಗಿದ್ದರಲ್ಲದೆ ಪ್ರತಿಭಟನೆ ನಡೆಸದಂತೆ ಅವಾಜ್ ಹಾಕಿದ್ದಾರೆ. ಇದರಿಂದ ಕೆರಳಿದ ಜನ ಹಿಡಿದು ಗೂಸಾ ಕೊಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin