ದಲಿತರು ಇಂದಿಗೂ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇರುತ್ತಾರೆ : ಎಚ್.ಕೆ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

Jakkappa--01

ಬೆಂಗಳೂರು, ಮೇ 15-ಇಂದಿರಾ ಕಾಲದಿಂದಲೂ ದಲಿತರು ಕಾಂಗ್ರೆಸ್‍ನೊಂದಿಗಿದ್ದು, ಮುಂದೆಯೂ ಕೂಡ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷರಾದ ಎಸ್.ಜಕಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ದಲಿತರನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುವುದು ಬೇಡ. ಅವರಿಗಾಗಿರುವ ಅನ್ಯಾಯಗಳನ್ನು ಸರಿಪಡಿಸಬೇಕು ಎಂದರು.ಕಾಂಗ್ರೆಸ್ ಪಕ್ಷಕ್ಕೆ ದಲಿತ ಶಕ್ತಿಯ ಅಗತ್ಯವಿದೆ. ರಾಜ್ಯದಲ್ಲಿ ಅಧಿಕಾರ ಸಿಗದಿದ್ದರೆ ಕಾಂಗ್ರೆಸ್ ನಾಯಕರು ಚುರುಮುರಿ ತಿನ್ನಬೇಕಾಗುತ್ತದೆ. ದಲಿತ ಶಕ್ತಿಯನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ಅವರ ಧ್ವನಿಯಾಗಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಎಸ್ಸಿ-ಎಸ್ಟಿ ಉಪ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಆ ವರ್ಗದ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.  ರಾಜ್ಯದಲ್ಲಿ 1.8 ಕೋಟಿಯಷ್ಟು ದಲಿತರ ಜನಸಂಖ್ಯೆ ಇದೆ. ಆದರೆ ಅವರ ಧ್ವನಿ ಕಡಿಮೆಯಾಗಿದೆ. ಇವರಿಗೆ ನಾವು ದನಿಯಾಗಬೇಕು. ಇವರ ಅರ್ಧದಷ್ಟಿಲ್ಲದ ಜನಸಂಖ್ಯೆಯವರು ದನಿಯಾಗಬೇಕು ಎಂದು ಹೇಳಿದರು.

ದೇಶಾದ್ಯಂತ ದಲಿತರನ್ನು ಎಚ್ಚರಿಸುವ ಶಕ್ತಿ ಇರುವುದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲೆ ಅಡಗಿದ್ದರು ಅವರನ್ನು ಸಂಸತ್‍ಗೆ ಕರೆತರುವಂತಹ ಶಕ್ತಿ ಅವರಿಗಿದೆ. ಖರ್ಗೆ ಅವರು ನಮ್ಮೆಲ್ಲರ ನಾಯಕ ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಜಕ್ಕಪ್ಪನ ವರು, ಆರ್‍ಎಸ್‍ಎಸ್ ಅವರು ದಲಿತರ, ಹಿಂದುಳಿದವರ ಹಕ್ಕುಗಳನ್ನು ಧಮನಿಸುವ ಕೆಲಸವನ್ನು ಮಾಡುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಬಿವಿ ಮೂಲಕ ಅಹಿಂದ ವಿದ್ಯಾರ್ಥಿಗಳ ಹೊರಹಾಕುವ ಕೆಲಸ ಮಾಡುತ್ತಿದೆ. ಇವೆಲ್ಲದರ ವಿರುದ್ದದ ಹೋರಾಟ ನಾವು ಮಾಡಬೇಕಾಗಿದೆ. ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.ಸಚಿವ ರುದ್ರಪ್ಪ ಲಮಾಣಿ, ಮುಖಂಡರಾದ ಹಿಂಡಸಗೇರಿ, ಜಲಜನಾಯಕ, ವೀರಣ್ಣ ಮತ್ತಿಕಟ್ಟಿ, ಉಗ್ರಪ್ಪ, ಕಳಲೆ ಕೇಶವಮೂರ್ತಿ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin