ದಲಿತರ ಮೇಲಿನ ದೌರ್ಜನ್ಯ ತಡೆಗೆ ಎಸ್ಪಿ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

belagam-7

ಮುದ್ದೇಬಿಹಾಳ,ಸೆ.27- ದಲಿತರ ಮೇಲಿನ ದೌರ್ಜನ್ಯಗಳನ್ನು ಜಿಲ್ಲೆಯಲ್ಲಿ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎನ್. ಸಿದ್ಧರಾಮಪ್ಪ ವಿಫಲರಾಗಿದ್ದಾರೆ ಎಂದು ಡಿಎಸ್‍ಎಸ್ ವಿಭಾಗೀಯ ಸಂಚಾಲಕ ಜೀತೇಂದ್ರ ಕಾಂಬಳೆ ಆರೋಪಿಸಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಕಳೆದ 23 ದಿನಗಳಿಂದ ನಡೆಯುತ್ತಿರುವ ತಾಲೂಕಿನ ಕೋಳೂರ ಗ್ರಾಮದ ದಲಿತರು ಹಾಗೂ ಹಿಂದುಳಿದ ವರ್ಗದವರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೈೀಟಿ ನೀಡಿ ದಲಿತ ಸಂಘರ್ಷ ಸಮೀತಿಯ ವತಿಯಂದ ಬೆಂಬಲ ಸೂಚಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋಳೂರ ಗ್ರಾಮದಲ್ಲಿ ದಲಿತರು ಮತು ಹಿಂದುಳಿದ ಜನರ ಮೇಲೆ ದೌರ್ಜನ್ಯ ಘಟನೆಗಳಿಗೆ ಮೂಲ ಕಾರಣೀಭೂತರೇ ಪೊಲೀಸ ಇಲಾಖೆಯವರು. ಮುಖ್ಯವಾಗಿ ಎಸ್ಪಿ ಹಾಗೂ ಡಿಎಸ್‍ಪಿ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸ್ಥಳೀಯ ಶಾಸಕರು ಕೂಡಾ ಹಿಂದುಳಿದ ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ಪರೋಕ್ಷವಾಗಿ ದೌರ್ಜನ್ಯ ಮಾಡುತ್ತಿದ್ದಾರೆ,ಸಂವಿಧಾನ ಬದ್ದವಾಗಿ ಹೋರಾಟ ನಡೆಸುತ್ತಿರುವ ಧರಣಿ ನಿರತರಿಗೆ ಗಡಿಪಾರು ಮಾಡುತ್ತೇವೆ.ರೌಡಿಶೀಟರ್‍ನಲ್ಲಿ ಸೇರಿಸುತ್ತೇವೆ ಎಂದು ಬೆದರಿಸುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.
ಈ ಬಗ್ಗೆ ಅಧಿಕಾರಿಗಳ ದೌರ್ಜನ್ಯವನ್ನು ಮುಖ್ಯಮಂತ್ರಿ, ಗೃಹ ಸಚಿವರು, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ, ಅಲ್ಲದೇ ಅನ್ಯಾಯದ ವಿರುದ್ಧ ಇದೇ 29ರಂದು ಜನ, ಜಾನುವಾರುಗಳ ಸಮೇತ ಉಪವಾಸ ಸತ್ಯಾಗ್ರಹಕ್ಕೂ ಸಂಘಟನೆಯ ವತಿಯಿಂದ ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಡಿವೈಎಸ್‍ಪಿ ಲಂಚ ಪಡೆದುಕೊಂಡು ಗ್ರಾಮದ ಗುರು ತಾರನಾಳ ಎಂಬುವರ ಹೆಸರನ್ನು ಕೈ ಬಿಟ್ಟಿದ್ದಾರೆ. ಸವರ್ಣೀಯರೇ ಚೆನ್ನಮ್ಮ ವೃತ್ತಕ್ಕೆ ಅಪಮಾನ ಮಾಡಿದ್ದರೂ ದಲಿತರ ಹಾಗೂ ಹಿಂದುಳಿದ ವರ್ಗದವರ ಮೇಲೆ ಸುಳ್ಳು ಆಪಾದನೆ ಮಾಡಲಾಗಿದ್ದು ಅದನ್ನು ಪೊಲೀಸರು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ.ಅವಮಾನ ಮಾಡಿದವರೇ ದಲಿತರ ಹಾಗೂ ಹಾಲುಮತ ಸಮಾಜದವರ ಮೇಲೆ ಎಸ್‍ಸಿಎಸ್‍ಟಿ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದು ಈ ಪ್ರಕರಣ ಸಿಬಿಐ ತನಿಖೆ ನಡೆಸಬೇಕು ಎಂದು ಹೇಳಿದರು.63 ಜನರ ಮೇಲೆ ಪ್ರಕರಣ ದಾಖಲಿಸಿದ್ದು ಅದರಲ್ಲಿ 51 ಜನರ ಮೇಲೆ ಪ್ರಕರಣಗಳನ್ನುಕೈ ಬಿಟ್ಟಿದ್ದಾರೆ.ಡಿವೈಎಸ್‍ಪಿ ಸುಳ್ಳು ಪ್ರಕರಣ ದಾಖಲಿಸಿದ್ದು ಸುಳ್ಳು ಪ್ರಕರಣ ದಾಖಲಿಸಿದ ದಲಿತ ಮಹಿಳೆಯ ವಿರುದ್ಧವೂ ಕ್ರಮ ಜರುಗಿಸಬೇಕು. ಡಿವೈಎಸ್‍ಪಿ ಅಮಾನತುಗೊಳಿಸಬೇಕು.

 

ದೌರ್ಜನ್ಯಕ್ಕೊಳಗಾಗದವರಿಗೆ ತಲಾ ಐದು ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಬೇಕು.ಪ್ರಕರಣದಲ್ಲಿ ಹಲ್ಲೆಗೊಳಗಾಗದ ವ್ಯಕ್ತಿಗೆ 10 ಲಕ್ಷ ರೂ.ಪರಿಹಾರ ನೀಡಬೇಕು ಎಂದು ತಿಳಿಸಿದರು. ಧರಣಿಯಲ್ಲಿ ಜಿಲ್ಲಾ ಸಂಚಾಲಕ ಸಂಜು ಕಂಬಾಗಿ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಕೊಟ್ರಪ್ಪ ಹರನಾಳ, ಸಂಗನಗೌಡ ಬಿರಾದಾರ, ಕೆ.ಎನ್.ಹರನಾಳ, ಗದ್ದೆಪ್ಪ ಹುಲ್ಲಳ್ಳಿ, ಸಂಗಪ್ಪ ತಂಗಡಗಿ, ಎಸ್.ಎಸ್.ಪೂಜಾರಿ, ಸಂಗಣ್ಣ ಗೋನಾಳ,ಶಿವಾನಂದ ಬಳವಾಟ, ಬಸವರಾಜ ಬ್ಯಾಲ್ಯಾಳ ಮತ್ತಿತರರು ಇದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin