ದಲಿತರ ಮೇಲೆ ನಡೆಸುವವರ ವಿರುದ್ಧ ಗೂಂಡಾಕಾಯ್ದೆ ಜಾರಿ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

ambedkar

ಮಹದೇವಪುರ, ಆ.8-ದಲಿತರ ಮೇಲೆ ದಬ್ಬಾಳಿಕೆ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಭೀಮವಾದದ ರಾಜ್ಯಾಧ್ಯಕ್ಷ ಮೋಹನ್‍ರಾಜ್ ಒತ್ತಾಯಿಸಿದರು.ಹನುಗೊಂಡನಹಳ್ಳಿ ಹೋಬಳಿಯ ತಿರುವರಂಗ ಹಾಗೂ ಮೇಡಿ ಮಲ್ಲಸಂದ್ರದಲ್ಲಿ ಶಾಖೆ ಹಾಗೂ ಸಮಿತಿಯನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಇಂತಹ ಸರ್ಕಾರಗಳು ನಮಗೆ ಬೇಕಾ ಎಂದು ಪ್ರಶ್ನಿಸಿದರು.ಬಡತನ, ಅಸ್ಪಷ್ಯತೆ, ಅಸಮಾನತೆ ಹೋಗಲಾಡಿಸಲು ಯುವ ಜನತೆ ಮುಂದೆ ಬರಬೇಕು. ದೇಶದಲ್ಲಿ ಯುವ ಶಕ್ತಿ ಗರ್ಜಿಸಿದರೆ ಇಡೀ ದೇಶವೇ ಅಲ್ಲಾಡುತ್ತದೆ. ಅಸಮಾನತೆ ಹೋಗಲಾಡಿಸುವ ಮೂಲಕ ಯುವಶಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.
ಇತ್ತೀಚಿನ ಸಮಾಜದಲ್ಲಿ ಮೀಸಲಾತಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸುಳ್ಳು ಪ್ರಮಾಣ ಪತ್ರಗಳನ್ನು ಸೃಷ್ಠಿ ಮಾಡಿಕೊಂಡು ಹಿಂದುಳಿದವರಿಗೆ ಸಿಗಬೇಕಾಗಿರುವ ಸವಲತ್ತುಗಳನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಬೋಗಸ್ ಪ್ರಮಾಣ ಪತ್ರವನ್ನು ಮಾಡಿ ಸವಲತ್ತು ಉಪಯೋಗಿಸಿಕೊಂಡಿರುವ ಐಪಿಎಸ್ ಕೆಂಪಯ್ಯ ಅವರನ್ನು ಗೃಹ ಸಚಿವರ ಅಡ್ವೈಸರ್ ಆಗಿ ಇಟ್ಟುಕೊಂಡಿದ್ದು ಈ ಕೂಡಲೇ ಅವರನ್ನು ಆ ಸ್ಥಾನದಿಂದ ತೆಗೆದು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಸರ್ಕಾರಿ ಸ್ವಾಮ್ಯದಲ್ಲಿರುವ ಖಾಸಗಿ ಕಾರ್ಖಾನೆಗಳು ಮುಚ್ಚುವ ಹಂತದಲ್ಲಿದ್ದು, ಇಂತಹ ಜಾಗಗಳಲ್ಲಿ ಮೀಸಲಾತಿ ಜಾರಿಗೆ ತಂದರೆ ಕಾರ್ಖಾನೆಗಳು ಲಾಭದಾಯಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ದೇಶಾದ್ಯಂತ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಹಿಂದುಳಿದವರ ಮೇಲೆ ದೌರ್ಜನ್ಯ ಮಾಡಿ ಅಂಬೇಡ್ಕರ್ ಜಯಂತಿ ಆಚರಿಸಿದರೆ ಯಾವ ಅರ್ಥ ಸಿಗುತ್ತದೆ. ಮೊದಲು ದೌಜನ್ಯ ನಿಲ್ಲಿಸಿ ಅನಂತರ

ಅಂಬೇಡ್ಕರ್ ಜಯಂತಿ ಆಚರಿಸಿ ಎಂದು ಹೇಳಿದರು.ರಾಜ್ಯ ಸಮಿತಿ ಸದಸ್ಯ ಬಿ.ಎನ್.ವೆಂಕಟೇಶ್, ರಾಜ್ಯ ಸಂಚಾಲಕ ಸಿದ್ಧರಾಜು, ಜಿಲ್ಲಾ ಸಂಚಾಲಕ ಎಂ.ಸಿ.ನಾರಾಯಣ್, ಬೆ.ನಗರ ಜಿಲ್ಲಾ ಸಂಚಾಲಕ ಶ್ರೀನಿವಾಸ್, ಮಂಜುನಾಥ್, ರವಿ, ಗೋಕುಲ್, ಕೃಷ್ಣಪ್ಪ, ಮಂಜುನಾಥ್, ಜಾನ್, ಡ್ಯಾನಿಯಲ್, ಬೈರಪ್ಪ ಮತ್ತಿತರರಿದ್ದರು.

Facebook Comments

Sri Raghav

Admin