‘ದಲಿತ ರಾಜಕಾರಣಿಯನ್ನು ಹೀನಾಯವಾಗಿ ನಡೆಸಿಕೊಂಡಿದ್ದು ಇತಿಹಾಸದಲ್ಲೇ ಇದೆ ಮೊದಲು’

ಈ ಸುದ್ದಿಯನ್ನು ಶೇರ್ ಮಾಡಿ

v--srinivas--prasad--mla

ತಿ.ನರಸೀಪುರ,ಡಿ.4– ದಲಿತ ಹಿರಿಯ ರಾಜಕಾರಣಿಯೊಬ್ಬರನ್ನು ಬಹಳ ಹೀನಾಯವಾಗಿ ನಡೆಸಿಕೊಂಡಂತಂಹ ರೀತಿ ಇತಿಹಾಸದಲ್ಲೇ ಪ್ರಥಮ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಿ.ನರಸೀಪುರ ತಾಲ್ಲೂಕು ವಿ.ಶ್ರೀನಿವಾಸ್ ಪ್ರಸಾದ್ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾಭಿಮಾನಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ತತ್ವದಡಿ ನಿಸ್ವಾರ್ಥ ರಾಜಕಾರಣ ಮಾಡಿದ ನನಗೆ ಕಾರಣ ನೀಡದೆ ಏಕಾಏಕಿ ಸಂಪುಟದಿಂದ ಕೈಬಿಟ್ಟಿದ್ದು, ಬಹಳ ನೋವುಂಟು ಮಾಡಿದೆ ಎಂದರು.

1977 ರಿಂದ ಸುಮಾರು 47 ವರ್ಷಗಳ ಸುಧೀರ್ಘ ಕಾಲ ರಾಜಕೀಯದಲ್ಲಿ ದ್ದು, 5 ಬಾರಿ ಸಂಸದನಾಗಿ, ಅಟಲ್‍ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವನಾಗಿ ಸಮರ್ಥ ಕೆಲಸ ನಿರ್ವಹಿಸಿದ್ದೇನೆ. ಆದರೆ ಸಿಎಂ ಸಿದ್ದರಾಮಯ್ಯ, ತಮ್ಮ ಬೆಂಬಲಿಗರ ಪಿತೂರಿಯಿಂದ ನನ್ನನ್ನು ರಾಜಕೀಯವಾಗಿ ತುಳಿಯಲು ಈ ನಿರ್ಧಾರ ತೆಗೆದುಕೊಂಡಿದ್ದು ಬಹಳ ಬೇಸರ ತಂದಿದೆ ಎಂದರು.
ಪರಿಣಾಮಕಾರಿ ಹಾಗೂ ಶಕ್ತಿಯುತವಾದ ಮಂತ್ರಿಮಂಡಲ ರಚಿಸುವ ನೆಪ ಹೇಳಿ ಈಗ ತಾನೆ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ಪುತ್ರನನ್ನು ಸಚಿವನನ್ನಾಗಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನೂರು ಪರಮೇಶ್ವರ್‍ರನ್ನು ಸೃಷ್ಟಿಸಬಹುದೆ ಹೊರತು ಶ್ರೀನಿವಾಸ್‍ಪ್ರಸಾದ್‍ರಂತಹ ನಾಯಕನನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಸ್ವಾಭಿಮಾನಿ ಪೂರ್ವಬಾವಿ ಸಭೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು, ಹಿತೈಷಿಗಳು ಬಿಜೆಪಿ ಪಕ್ಷದ ನೂರಾರು ಕಾರ್ಯಕರ್ತರು, ಚುನಾಯಿತಿ ಪ್ರತಿನಿಧಿಗಳು ಪಟಾಕಿ ಸಿಡಿಸಿ, ಶಿಳ್ಳೆ, ಜೈಕಾರದೊಂದಿಗೆ ಸ್ವಾಗತಿಸಿದ್ದು ವಿಶೇಷ ವಾಗಿತ್ತು.  ಮುಡಾ ಮಾಜಿ ಅಧ್ಯಕ್ಷ ಮೋಹನ್‍ಕುಮಾರ್, ಜಿ.ಪಂ ಸದಸ್ಯ ಅಶ್ವಿನ್‍ಕುಮಾರ್, ತಾ.ಪಂ ಸದಸ್ಯರಾದ ಚಂದ್ರಶೇಖರ್, ಶಿವಮ್ಮ, ರಮೇಶ್, ಬಿಜೆಪಿ ಹಿರಿಯ ಮುಖಂಡ ಸಿ.ರಮೇಶ್, ಬಿಜೆಪಿ ಕ್ಷೇತ್ರಾಧ್ಯಕ್ಷ ಹಿರಿಯೂರು ಪರಶಿವಮೂರ್ತಿ, ಮಾಜಿ ಜಿ.ಪಂ ಸದಸ್ಯ ಪುಟ್ಟಬಸವಯ್ಯ,್ಣಮತ್ತಿತರರು ಹಾಜರಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin