ದಶಮ ಸೌಂದರ್ಯ ಲಹರೀ ಪಾರಾಯಣೋತ್ಸವದಲ್ಲಿ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Soudarya--01

ಬೆಂಗಳೂರು, ಅ.29- ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಇಂದು ದಶಮ ಸೌಂದರ್ಯ ಲಹರೀ ಪಾರಾಯಣೋತ್ಸವ ಅರಮನೆ ಮೈದಾನದಲ್ಲಿ ಜರುಗಿತು. ವೇದಾಂತ ಭಾರತಿ ಸಂಸ್ಥೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ದಶಮ ಸೌಂದರ್ಯ ಲಹರೀ ಪಾರಾಯಣೋತ್ಸವ ಮಹಾಸಮಾರ್ಪಣೆಯ ದಿವ್ಯ ಸಾನ್ನಿಧ್ಯವನ್ನು ಯಡತೊರೆ ಶ್ರೀ ಯೋಗಾನಂದೇಶ್ವರಿ ಸರಸ್ವತಿ ಮಠದ ಪೀಠಾಧ್ಯಕ್ಷರಾದ ಶ್ರೀ ಶಂಕರ ಭಾರತಿ ಮಹಾಸ್ವಾಮೀಗಳು ವಹಿಸಿದ್ದರು.  ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಮಾತೆಯರು ಮತ್ತು ಮಹನೀಯರು, ಶ್ರೀ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಶ್ಲೋಕ ಮತ್ತು ಶ್ರೀ ದಕ್ಷಿಣಾಮೂರ್ತಿ ಅಷ್ಟಕಗಳ ಸಮರ್ಪಣೆ ಮಾಡಿದರು.

ಸಹಸ್ರ ಸಹಸ್ರ ಕಂಠಗಳಲ್ಲಿ ಶ್ಲೋಕಗಳನ್ನು ಪಠಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ತದೇಕ ಚಿತ್ತದಿಂದ ಪಠಣವನ್ನು ಆಲಿಸಿದರು. ವಿದ್ಯಾರ್ಥಿಗಳು ಸೇರಿದಂತೆ ಪಾರಾಯಣೋತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಶಿಸ್ತುಬದ್ಧತೆಯನ್ನು ಪ್ರದರ್ಶಿಸಿದ್ದು ಕಂಡು ಬಂದಿತು. ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ದಶಮ ಸೌಂದರ್ಯ ಲಹರೀ ಪಾರಾಯಣೋತ್ಸವ ಸಂಚಲನ ಸಮಿತಿಯ ಗೌರವಾಧ್ಯಕ್ಷ, ನ್ಯಾಯಮೂರ್ತಿ ಶಿವರಾಜ್ ಬಿ.ಪಾಟೀಲ್, ಅಧ್ಯಕ್ಷ ಎಸ್.ಎಸ್.ನಾಗಾನಂದ, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Facebook Comments

Sri Raghav

Admin