ದಸರಾದಲ್ಲಿ ಉತ್ತಮವಾದ ಕಾರ್ಯಕ್ರಮ ರೂಪಿಸಿ : ಜಿಲ್ಲಾಧಿಕಾರಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

deputy--mysore--randeep

ಮೈಸೂರು, ಆ.17-ವಿಶ್ವವಿಖ್ಯಾತ ದಸರಾದಲ್ಲಿ ಈ ಬಾರಿ ಉತ್ತಮವಾದ ಕಾರ್ಯಕ್ರಮಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿ ರಣದೀಪ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನನಗೆ ಇದು ಮೊದಲ ದಸರಾ, ಆದರೆ ಅನುಭವಿ ಅಧಿಕಾರಿಗಳು ಇದ್ದೀರ. ಕಳೆದ ಬಾರಿಗಿಂತಲೂ ಉತ್ತಮವಾದ, ಜನಮೆಚ್ಚುವ ಕಾರ್ಯಕ್ರಮಗಳನ್ನು ಮಾಡೋಣ ಎಂದು ಹೇಳಿದರು.ಉತ್ತಮ ಕಾರ್ಯಕ್ರಮ ಸೇರಿದಂತೆ ದಸರಾಕ್ಕಾಗಿ ಒಟ್ಟು 17 ಉಪಸಮಿತಿಗಳನ್ನು ರಚಿಸಲಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮಗಳೂ ಕೂಡ ದೇಶ-ವಿದೇಶ, ರಾಜ್ಯ-ಹೊರರಾಜ್ಯದ ಎಲ್ಲರಿಗೂ ಮುದ ನೀಡುವಂತಹುದಾಗಿರಲಿ ಎಂದು ತಿಳಿಸಿದ್ದಾರೆ.
ಉಪಸಮಿತಿಯ ಉಪ ವಿಶೇಷಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯಕ್ರಮ ರೂಪಿಸಿ ಅತ್ಯಂತ ಯಶಸ್ವಿಯಾಗಿ ದಸರಾ ಮಹೋತ್ಸವ ನೆರವೇರಬೇಕೆಂದು ಅವರು ಮನವಿ ಮಾಡಿದ್ದಾರೆ.  ದಸರಾ ಸಂದರ್ಭದಲ್ಲಿ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಸೇರಿದಂತೆ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳು ಹಾಗೂ ನಗರದೆಲ್ಲೆಡೆ ಬಿಗಿ ಭದ್ರತೆ ಒದಗಿಸಬೇಕು. ಇದು ಪೊಲೀಸರಿಗೆ ಸವಾಲಾಗಿದೆ ಎಂದು ಹೇಳಿದ್ದಾರೆ.  ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin