ದಸರಾ ಆನೆಗಳು ಹಾಗೂ ಮಾವುತರಿಗೆ 1ಕೋಟಿ ವಿಮೆ

ಈ ಸುದ್ದಿಯನ್ನು ಶೇರ್ ಮಾಡಿ

Dasara-Elephant--01

ಮೈಸೂರು, ಆ.9- ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳು ಹಾಗೂ ಮಾವುತರಿಗೆ ವಿಮೆ ಮಾಡಿಸಲು ಜಿಲ್ಲಾಡಳಿತ ಮುಂದಾಗಿದೆ. ಒಂದು ಕೋಟಿ ರೂ.ಗಳ ವಿಮೆ ಮಾಡಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ ಅವರು ತಿಳಿಸಿದ್ದಾರೆ.

ಆನೆಗಳು ಅಂಬಾರಿ ಹೊರಲಿದ್ದು, ತಾಲೀಮು ವೇಳೆ ಏನಾದರೂ ತೊಂದರೆ ಉಂಟಾದಲ್ಲಿ ಭದ್ರತೆ ಹಿನ್ನೆಲೆಯಲ್ಲಿ ವಿಮೆ ಮಾಡಿಸಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಮೈಸೂರು ದಸರಾಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ನಾಗಪುರ ಹಾಡಿ ಬಳಿಯಿಂದ ಆ.12ರಂದು ಗಜಪಯಣ ಪ್ರಾರಂಭವಾಗಲಿದೆ.

ಮೊದಲ ಹಂತದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವಿಜಯ ಮತ್ತು ಕಾವೇರಿಯನ್ನು ಕರೆತರಲಾಗುತ್ತದೆ. ಇದರೊಂದಿಗೆ ಹೊಸ ಆನೆಗಳಾದ ಭೀಮ ಹಾಗೂ ವರಲಕ್ಷ್ಮಿಯನ್ನು ಹೆಚ್ಚುವರಿಯಾಗಿ ಕರೆತರಲು ತೀರ್ಮಾನಿಸಲಾಗಿದೆ.

Facebook Comments

Sri Raghav

Admin