ದಸರಾ ಪ್ರಯುಕ್ತ ಇಂದು ನಗರದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

mysore9

ಮೈಸೂರು, ಅ.4-ದಸರಾ ಪ್ರಯುಕ್ತ ಇಂದು ನಗರದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಪುರಭವನದ ಬಳಿ ಜಿಲ್ಲಾದಿಕಾರಿ ರಂದೀಪ್ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಸಾಂಸ್ಕೃತಿಕ  ನಗರಿ ಮೈಸೂರಿನಲ್ಲಿ 250ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ದಸರಾ ಸಂದರ್ಭದಲ್ಲಿ ಮಾತ್ರ ಪಾರಂಪರಿಕ ನಡಿಗೆ ಹಮ್ಮಿಕೊಳ್ಳದೆ ನಿರಂತರವಾಗಿ ಹಮ್ಮಿಕೊಳ್ಳಬೇಕೆಂದು ಹೇಳಿದರು.ದಸರಾ ನಂತರವೂ ಪಾರಂಪರಿಕ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗುವುದು ಎಂದರು.

mysore-6

ಪಾರಂಪರಿಕ ಕಟ್ಟಡಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ತಿಳಿಸುವುದು ಅತ್ಯಗತ್ಯವಾಗಿದೆ. ಈ ಕಟ್ಟಡಗಳನ್ನು ಸಂರಕ್ಷಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.ಉದ್ಘಾಟನೆ ನಂತರ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಪುರಭವನ, ಕೆ.ಆರ್.ವೃತ್ತ, ಮೈಸೂರು, ಮಹಾನಗರಪಾಲಿಕೆ, ದೊಡ್ಡಗಡಿಯಾರ,ಚಿಕ್ಕಗಡಿಯಾರ, ಆಯುರ್ವೇದ ಆಸ್ಪತ್ರೆ ಸೇರಿದಂತೆ ಪಾರಂಪರಿಕ ಕಟ್ಟಡಗಳನ್ನು ತೋರಿಸಿ ವಿವರಗಳನ್ನು ನೀಡಲಾಯಿತು.

► Follow us on –  Facebook / Twitter  / Google+

 

 

Facebook Comments

Sri Raghav

Admin