ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ಹೆಚ್ಚುವರಿ ರೈಲು ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

Dasara-01

ಮೈಸೂರು,ಸೆ.24-ದಸರಾ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅ.11 ಮತ್ತು 12ರಂದು ಮೈಸೂರು-ಬೆಂಗಳೂರು ಹಾಗೂ ಅ.11ರಂದು ಮೈಸೂರು-ಚಾಮರಾಜನಗರ ನಡುವೆ ಹೆಚ್ಚುವರಿ ರೈಲು ಸೇವೆ ಒದಗಿಸಲಾಗುವುದು ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅತುಲ್ ಗುಪ್ತ ತಿಳಿಸಿದ್ದಾರೆ.  ದಸರಾ ಮೆರವಣಿಗೆ ಹಾಗೂ ಪಂಜಿನ ಕವಾಯತ್ ವೀಕ್ಷಿಸಿ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಈ ವಿಶೇಷ ರೈಲು ಸೇವೆ ಒದಗಿಸಲಾಗುವುದು ಎಂದರು. ಮೈಸೂರು- ಹಾಸನ , ಮೈಸೂರು-ಧಾರವಾಡ ಎಕ್ಸ್‍ಪ್ರೆಸ್ ರೈಲು ಗಾಡಿಗೆ ಹೆಚ್ಚುವರಿ ನಿಲುಗಡೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin