ದಸರಾ ಹಿನ್ನೆಲೆ, 4 ದಿನ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

mysore
ಮೈಸೂರು, ಸೆ.26-ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜವಂಶಸ್ಥರು ಅರಮನೆಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸುವುದರಿಂದ ನಾಲ್ಕು ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.ಅ.1ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30ರವರೆಗೆ ಖಾಸಗಿ ದರ್ಬಾರ್ ನಡೆಯಲಿದ್ದು, ಆ ದಿನ ವಿಶೇಷ ಪೂಜೆ, ಪುನಸ್ಕಾರ ನಡೆಯಲಿದೆ. ಅ.10 ರಂದು ಆಯುಧಪೂಜೆಯಂದು ಬೆಳಿಗ್ಗೆ 10 ರಿಂದ 1.30ರವರೆಗೆ ಹಾಗೂ ಅ.11ರಂದು ವಿಜಯದಶಮಿ ಅಂಗವಾಗಿ ಜಂಬೂ ಸವಾರಿ ನಡೆಯುವುದರಿಂದ ಆ ದಿನ ಪೂರ್ತಿ ಹಾಗೂ ಅ.20ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಸಿಂಹಾಸನವನ್ನು ಬಿಚ್ಚಿಡುವ ಕಾರ್ಯಗಳು ನಡೆಯುವುದರಿಂದ ಈ ದಿನಗಳಲ್ಲಿ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin