ದಸೂಡಿ ರಸ್ತೆ ದುರಸ್ಥಿಗೆ ಒತ್ತಾಯಿಸಿ ರಸ್ತೆ ತಡೆ

ಈ ಸುದ್ದಿಯನ್ನು ಶೇರ್ ಮಾಡಿ

huliyaru-road--protest

ಹುಳಿಯಾರು, ಅ.4- ಹೋಬಳಿಯ ಗಡಿ ಗ್ರಾಮವಾದ ದಸೂಡಿಯಿಂದ ಹಿರಿಯೂರಿಗೆ ಸಂಪರ್ಕ ಕಲ್ಪಿಸುವ ಶೇಷಪ್ಪಮಹಳ್ಳಿ ರಸ್ತೆ ತೀರ ಹದಗೆಟ್ಟಿದ್ದು, ಶೀಘ್ರ ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಒತ್ತಾಯಿಸಿದರು.ರಸ್ತೆ ನಿರ್ಮಿಸಿ ಸುಮಾರು 15 ವರ್ಷಗಳೆ ಕಳೆದಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಮುಳ್ಳಿನ ಪೂದೆ, ಗಿಡಗಂಟೆಗಳು ಬೆಳೆದು ಕಾಡುಪ್ರಾಣಿಗಳು ಹಾಗೂ ವಿಷಜಂತುಗಳ ಆವಾಸ ಸ್ಥಾನವಾಗಿದೆ. ಅಲ್ಲದೆ ರಸ್ತೆಯಲ್ಲಿ ಆಳೆತ್ತರದ ಗುಂಡಿಗಳು ಬಿದ್ದಿದ್ದು, ವಾಹ ಸಂಚಾರರು ಹಾಗೂ ಸಾರ್ವಜನಿಕರು ಓಡಾಡಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಎಂಎಲ್‍ಎ, ಎಂಪಿ, ಮಿನಿಸ್ಟರ್ ಹೀಗೆ ಎಲ್ಲ ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡಿಸದಿದ್ದರೆ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ತಾಪಂ ಮಾಜಿ ಸದಸ್ಯ ರಂಗಸ್ವಾಮಣ್ಣ ಎಚ್ಚರಿಸಿದ್ದಾರೆ.ಇಲ್ಲಿನ ರಸ್ತೆಯ ಅದ್ವಾನ ಕಂಡು ಕಾನ್ವೆಂಟ್ ವಾಹನ ನಿಲ್ಲಿಸಿದ್ದಾರೆ. ಈ ಸಾರಿಗೆ ವ್ಯವಸ್ಥೆಯಿಂದ ಹಲವು ಹಳ್ಳಿಗಳಿಂದ ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ, ರೈತರಿಗೆ ತುಂಬಾನೆ ಉಪಯೋಗವಾಗಿದ್ದು, ಇನ್ನಾದರೂ ರಸ್ತೆ ಸರಿಪಡಿಸುವಂತೆ ಗ್ರಾಮಸ್ಥ ಬಸವರಾಜು ಆಗ್ರಹಿಸಿದ್ದಾರೆ.ಗ್ರಾಪಂ ಅಧ್ಯಕ್ಷೆ ಶೋಭಾ, ಸದಸ್ಯರಾದ ಚಿಕ್ಕಣ್ಣ, ರೈತ ಸಂಘದ ಅಶ್ವತನಾರಾಯಣಶೆಟ್ಟಿ, ನಾಗರಾಜು, ಡಿ.ಸಿ.ಕೆಂಚಯ್ಯ, ಜಗ್ನಾಥಪ್ಪ, ಚಿತ್ತಪ್ಪ, ಬಿ.ಕೆ.ನಾಗರಾಜು, ಹನುಮಂತಯ್ಯ, ಶಾಂತಕುಮಾರ್ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin