ದಾಖಲೆ ಬರೆದ ಆ್ಯಂಡಿ ಮರ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Andy

ರಿಯೊ ಡಿ ಜನೈರೋ, ಆ. 15– ಬ್ರಿಟನ್‍ನ ಆ್ಯಂಡಿ ಮರ್ರೆ ಪುರುಷರ ಟೆನ್ನಿಸ್ ಸಿಂಗಲ್ಸ್‍ನಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಗೋಲ್ಡ್ ಮೆಡೆಲ್‍ಗಳನ್ನು ಗಳಿಸಿದ ವಿಶ್ವದ ಪ್ರಥಮ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.  ಫೈನಲ್ಸ್‍ನಲ್ಲಿ ಅಜೆಂಟೈನಾದ ಜೌನ್ ಮಾಟ್ರಿನ್ ಡೆಲ್ ಫೋಟ್ರೋ ಅವರ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 7-5, 4-6, 6-2, 7-5 ರ ಸೆಟ್ಸ್‍ಗಳ ಗೆಲುವಿನ ಮೂಲಕ ಈ ಚಾರಿತ್ರಿಕ ಸಾಧನೆ ನಿರ್ಮಿಸಿದ್ದಾರೆ. 2012ರಲ್ಲಿ ಲಂಡನ್‍ನಲ್ಲಿ ನಡೆದ ಸಿಂಗಲ್ಸ್ ಟೆನ್ನಿಸ್‍ನ ಫೈನಲ್‍ನಲ್ಲೂ ಗೆಲ್ಲುವ ಮೂಲಕ ಬಂಗಾರದ ಪದಕಕ್ಕೆ ಭಾಜನರಾಗಿದ್ದರು. ಅಲ್ಲದೆ ಮುರ್ರೆ 2012ರ ಯುಎಸ್ ಒಪನ್, 2013 ಮತ್ತು 2016ರ ವಿಂಬಲ್ಡನ್ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

Facebook Comments

Sri Raghav

Admin