ದಾಖಲೆ ಬೆಲೆಗೆ ಹರಾಜಾಯ್ತು ಟ್ರಂಪ್ ಸಹಿಯುಳ್ಳ ವಿಸ್ಕಿ ಬಾಟಲ್‍

ಈ ಸುದ್ದಿಯನ್ನು ಶೇರ್ ಮಾಡಿ

Trump-01

ಅಮೆರಿಕ, ಜ.14- ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿಯುಳ್ಳ ವಿಸ್ಕಿ ಬಾಟಲ್‍ಗೆ ಲಂಡನ್‍ನಲ್ಲಿ ಭಾರೀ ಬೇಡಿಕೆ ಬಂದಿದೆ. ಒಂದು ಬಾಟಲ್ ವಿಸ್ಕಿ ಬೆಲೆ 7334 ಡಾಲರ್ ಅಂದರೆ ಸುಮಾರು 5 ಲಕ್ಷ ರೂ.ಗೆ ಹರಾಜಾಗಿದೆ.  2012ರಲ್ಲಿ ಡೊನಾಲ್ಡ್ ಟ್ರಂಪ್ ಗ್ರೇನ್ ಡ್ರೋನಚ್ ಸಿಂಗಲ್ ಮಾಲ್ಟ್ ವಿಸ್ಕಿ ಬಾಟಲ್‍ಗಳ ಮೇಲೆ ಸಹಿ ಮಾಡಿದ್ದರು.  ಬೆರ್ದಿನ್ ಶೈರ್‍ನಲ್ಲಿ ನಡೆದ ಟ್ರಂಪ್ ಇಂಟರ್‍ನ್ಯಾಷನಲ್ ಗಾಲ್ಫ್ ಲಿಂಕ್ ಉದ್ಘಾಟನಾ ಸಮಾರಂಭದಲ್ಲಿ ಗಿಫ್ಟ್ ಬಾಕ್ಸ್ ಆಗಿ ತರಲಾಗಿದ್ದ ವಿಸ್ಕಿ ಬಾಟಲ್ ಮೇಲೆ ಟ್ರಂಪ್ ಸಹಿ ಹಾಕಿದ್ದರು. ಗ್ಲಾಸ್ಗೋನಲ್ಲಿ ಈ ವಿಸ್ಕಿ ಬಾಟಲ್‍ಅನ್ನು ಹರಾಜು ಹಾಕಲಾಗಿದೆ. ಕೆನಡಾದ ವ್ಯಕ್ತಿಯೊಬ್ಬ ಇದನ್ನು 7334 ಅಮೆರಿಕನ್ ಡಾಲರ್ ಕೊಟ್ಟು ಕೊಂಡುಕೊಂಡಿದ್ದಾನೆ. ಗ್ಲೇನ್ ಡ್ರೋನಚ್ ಕಂಪೆನಿ ವಿಸ್ಕಿ ಅದ್ಭುತವಾಗಿದ್ದು, ಟ್ರಂಪ್ ಸಹಿಯಿಂದ ಅದಕ್ಕೆ ಇನ್ನಷ್ಟು ಮಹತ್ವ ಬಂದಿದೆ ಎಂದು ವಿಸ್ಕಿ ತಜ್ಞ ಲೌರಿಬ್ಲಾಕ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin