ದಾಖಲೆ ವಹಿವಾಟು ನಡೆಸಿದ ಕರ್ನಾಟಕ ಸಾಬೂನು-ಮಾರ್ಜಕ ನಿಯಮಿತ

ಈ ಸುದ್ದಿಯನ್ನು ಶೇರ್ ಮಾಡಿ

Soap-And-Detargent

ಬೆಂಗಳೂರು, ಮೇ 24– ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದ್ದು 2016-17ನೇ ಸಾಲಿನಲ್ಲಿ 521.55 ಕೋಟಿ ರೂ. ದಾಖಲೆ ವಹಿವಾಟು ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೈಗಾರಿಕಾ ವಲಯದಲ್ಲಿ ಹಲ ವಾರು ಏರಿಳಿತಗಳ ನಡುವೆಯೂ ದೃಢವಾದ  ಕಾರ್ಯ ತಂತ್ರಗಳನ್ನು ಅಳವಡಿಸಿ ಕಾರ್ಯಗತಗೊಳಿಸುವ ಮೂಲಕ ಉತ್ಪನ್ನಗಳ ಮಾರಾಟ ಜಾಲದ ಸಾಮಥ್ರ್ಯವನ್ನು ದೇಶದಾ ದ್ಯಂತ ವಿಸ್ತರಿಸಿದೆ. ಇದಲ್ಲದೆ ಸರ್ಕಾರಿ/ಖಾಸಗಿ ಸಂಘ- ಸಂಸ್ಥೆಗಳಿಗೂ ಸಹ ಉತ್ಪನ್ನಗಳ ಮಾರಾಟವನ್ನು ವಿಸ್ತರಿಸು ವುದರೊಂದಿಗೆ ಉತ್ಪನ್ನದ ವೆಚ್ಚವನ್ನು ಹತೋಟಿಯಲ್ಲಿರಿಸಿ ಉತ್ಪಾದನಾ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಸಂಸ್ಥೆ ಶೇ.10ರಷ್ಟು ಗಣನೀಯ ಪ್ರಮಾಣದಲ್ಲಿ ಪ್ರಗತಿ ಹೊಂದಿದೆ.ಕಂಪೆನಿಯು ತನ್ನ ಪ್ರಗತಿಶೀಲ ಬೆಳವಣಿಗೆಗಾಗಿ ಪ್ರತಿ ವರ್ಷ ಹಲವಾರು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನವಾಗಿರುವುದಲ್ಲದೆ 2016-17ನೇ ಸಾಲಿನಲ್ಲೂ ಸಂಸ್ಥೆಗೆ ಹಲವಾರು ಪ್ರಶಸ್ತಿಗಳು ಲಭಿಸಿದೆ. ಅವುಗಳಲ್ಲಿ ಅತ್ಯುತ್ತಮ ರಫ್ತು ವಹಿವಾಟಿಗಾಗಿ ಭಾರತ ಸರ್ಕಾರದ ಕೆಮೆಕ್ಸಿಲ್ ವತಿಯಿಂದ ಅರ್ಹತಾ ಪ್ರಮಾಣ ಪತ್ರವನ್ನು ಪಡೆದಿದೆ. ಅತ್ಯುತ್ತಮ ಸಾಧನೆಗಾಗಿ 2016-17ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಹಾಗೂ 2015-16ನೇ ಸಾಲಿಗೆ ಭಾರತ ಸರ್ಕಾರದ ಆರ್ಥಿಕ ಇಲಾಖೆಯಿಂದ ಸಮ್ಮಾನ ಪತ್ರ ಪ್ರಶಸ್ತಿಯನ್ನು ಪಡೆದಿದೆ.

ಸಂಸ್ಥೆಯ ಪ್ರಮುಖ ಹಾಗೂ ಸಾಂಪ್ರದಾಯಿಕ ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಕ್ಕೆ ಜಿಐ ಪ್ರಮಾಣ ಪತ್ರ ಕೂಡಾ ಲಭ್ಯವಾಗಿದೆ. ಕಂಪೆನಿಯು ಗುಣನೀತಿಗಾಗಿ ಮತ್ತು ಪರಿಸರ ನೀತಿಗಾಗಿ ಪ್ರಮಾಣ ಪತ್ರವನ್ನು ಪಡೆದಿದೆ.  ಭವಿಷ್ಯದ ಯೋಜನೆಗಳನ್ನು ಉತ್ತೇಜಿಸಿ ಕಾರ್ಯರೂಪಕ್ಕೆ ತರಲು ವೆಚ್ಚಗಳನ್ನು ಕಡಿತಗೊಳಿಸಿ ಉತ್ಪನ್ನಗಳ ಮಾರಾಟವನ್ನು ವೃದ್ಧಿಸುವ ಮೂಲಕ ಕೆಎಸ್‍ಡಿಎಲ್ ಸಂಸ್ಥೆಯು ತನ್ನ ಕಾರ್ಯಕ್ಷಮತೆ ಮತ್ತು ಬೆಣವಣಿಗೆಯಿಂದ 2017- 18ನೇ ಸಾಲಿನಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ನಿರೀಕ್ಷಿಸಿದೆ.  ಮೈಸೂರು ಸ್ಯಾಂಡಲ್ ಈಗಾ ಗಲೇ ವಿಶ್ವದರ್ಜೆಯ ಬ್ರಾಂಡ್ ಆಗಿದ್ದು, ಇದರ ಗುಣಮಟ್ಟ ಮತ್ತು ಉತ್ಕ್ರಷ್ಟತೆಯು ಕೇವಲ ಊಹೆಯಲ್ಲ ಇದು ನಿರ್ವಿವಾದ ಅನ್ನುವುದು ಸತ್ಯ.

ಇತಿಹಾಸದಲ್ಲೇ ಕರ್ನಾಟಕ ಶ್ರೀಗಂಧದ ನಾಡೆಂದು ಪ್ರಖ್ಯಾತಿ ಪಡೆದಿರುವುದಲ್ಲದೆ ಮೈಸೂರು ಶ್ರೀಗಂಧವು ತನ್ನದೇ ಆದ ಆಗಮ್ಯ ಸ್ಥಾನ ಉಳಿಸಿಕೊಂಡಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ ಇತ್ತೀಚೆಗಷ್ಟೇ 100 ವರ್ಷಗಳನ್ನು ಪೂರೈಸಿದ್ದು, ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್‍ರವರ ದೂರದೃಷ್ಟಿ.

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಮಾರ್ಗ ದರ್ಶನದಲ್ಲಿ 1916ರಲ್ಲಿ ಸಂಸ್ಥೆ ಪ್ರಾರಂಭವಾಗಿ ಗಂಧದ ಮರದಿಂದ ಶ್ರೀಗಂಧದೆಣ್ಣೆಯನ್ನು ತಯಾರಿಸಿ ಇಂದಿಗೂ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ಜಗತ್ತಿನಲ್ಲೇ ಉತ್ತಮ ನೈಸರ್ಗಿಕ ಶ್ರೀಗಂಧದೆಣ್ಣೆ ಎಂಬ ಹೆಸರು ಪಡೆದು ಇಂದು ಭಾರತದ ಸುಗಂಧ ರಾಯಭಾರಿ ಎಂದೇ ಖ್ಯಾತಿಯಾಗಿದೆ.

1965ರಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಯುಎಇ, ಕುವೈತ್, ಸೌಧಿಅರೇಬಿಯಾ, ಬಹರೀನ್, ಕತಾರ್ ಮತ್ತು ಇತರೆ ಪ್ರಮುಖ ರಾಷ್ಟ್ರಗಳಾದ ಅಮೆರಿಕಾ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್, ಫ್ರಾನ್ಸ್, ಚೈನಾ, ಜಪಾನ್, ಹಾಂಗ್‍ಕಾಂಗ್, ಇರಾಕ್, ಮಲೇಶಿಯಾ, ಸಿಂಗಪುರ, ತೈವಾನ್, ಆಸ್ಟ್ರೇಲಿಯಾ, ನೇಪಾಳ್ ಸೇರಿದಂತೆ ಮತ್ತಿತರರ ರಾಷ್ಟ್ರಗಳಿಗೆ ತನ್ನ ಉತ್ಪನ್ನಗಳನ್ನು ನಿರಂತರವಾಗಿ ರಫ್ತು ಮಾಡುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin