ದಾನೇಶ್ವರ ಶ್ರೀಗಳ ದರ್ಶನಕ್ಕೆ ಭಕ್ತ ಮಹಾಪೂರ

ಈ ಸುದ್ದಿಯನ್ನು ಶೇರ್ ಮಾಡಿ

10

ಬಂಡಿಗಣಿ,ಫೆ.8- ಬಬಲಾದಿ ಚಿಕ್ಕಯ್ಯ ಹೇಳಿದಂತೆ ಹಾದಿ ಹಿಡಿಸಲಾರದಷ್ಟು ಬರವುದು ದಂಡು ಎಂದ ಪ್ರಕಾರ ಕಲಿಯುಗದಲ್ಲಿ ಅವತಾರಿ ಪುರಷ ಚಕ್ರವರ್ತಿ ದಾನೇಶ್ವರರ ದಿವ್ಯ ದರ್ಶನಕ್ಕೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಜಿಲ್ಲೆಯ ಅಥಣಿ ತಾಲೂಕಿನ ಮದಭಾಂವಿ ಗ್ರಾಮದಿಂದ ಪಾದಯಾತ್ರೆ ಹೊರಟ ಭಕ್ತರು ಮಾರ್ಗ ಉದ್ದಕ್ಕೂ ಓಂ ನಮೋ ಭಗವತೆ ದಾನೇಶ್ವರಾಯ ಎಂಬ ಮಂತ್ರ ಪಠಿಸುತ್ತಿದ್ದರು. ಶ್ರೀಗಳ ಭಾವಚಿತ್ರ ಸತ್ತಿಗೆ ಪಲ್ಲಕ್ಕಿ, ಬ್ಯಾನರ್, ಹಾಗೂ ಹಸಿರು ಕೆಂಪು ನಿಶಾನಿಗಳನ್ನು ಹಿಡಿದುಕೊಂಡು ರಸ್ತೆಯ ಎಡಬದಿಯಲ್ಲಿ ಸುಸಜ್ಜಿತವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಒಂದೇ ಎಂಬಂತೆ ಅಲ್ಲಲ್ಲಿ ಮುಸ್ಲಿಂ ಜನಾಂಗದ ಮಹಿಳೆಯರು ಹಾಗೂ ಎಲ್ಲ ಧರ್ಮಿಯರು ಕೂಡಾ ಕಾಣಿಸುತ್ತಿರುವುದು ವಿಶೇಷ. ಪಾದಯಾತ್ರೆಯಲ್ಲಿ ಸುಮಾರು 12-15 ಸಾವಿರ ಜನಸಂಖ್ಯೆ ಕಂಡುಬಂದಿದ್ದು, ಭಕ್ತಾಧಿಗಳಲ್ಲಿ ಸ್ವಯಂ ಶಿಸ್ತು ಕಾಣಬಂದಿತ್ತು. ಆಗಾಗ ಪಾದಯಾತ್ರೆಯಲ್ಲಿ ಬಾಳೆಹಣ್ಣು, ನೀರು, ಹಣ್ಣಹಂಪಲ ವಿತರಿಸುತ್ತಿದ್ದರು.

ಕೊಂಬಿನ ಸಿಂಗರು ಪಾದಯಾತ್ರೆಗೆ ಕಳೆ ತಂದಿತು. ಕುಂಭ ಹೊತ್ತ ಮಹಿಳೆಚಿುರು, ಸುಮಂಗಲೆಯರು, ವಯೋವೃದ್ಧರು ಪಾಲ್ಗೊಂಡಿದ್ದರು. ಅಲ್ಲಲ್ಲಿ ಗ್ರಾಮ ಸಮೀಪಿಸಿದಂತೆ ದಾನೇಶ್ವರ ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಜೈಕಾರ ಹಾಕುತ್ತಾ ಹೂವಿನ ಸುರಿಮಳೆಗೈದರು, ಪಾದಯಾತ್ರಿಗಳು ಸೋಮವಾರದಂದು ಜಿಲ್ಲೆಯ ದಾನೇಶ್ವರ ಶ್ರೀಗಳ ಜನ್ಮಸ್ಥಳವಾದ ಮುಂಜಾನೆ ಸವದಿಯಿಂದ ಹೊರಟು ಹಿಪ್ಪರಗಿ ಕುಲಹಳ್ಳಿ ಮಾರ್ಗವಾಗಿ ಭೂಲೋಕದಲ್ಲಿ ಕೈಲಾಸವೆನಿಸಿರುವ ಶ್ರೀ ಬಸವಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠಕ್ಕೆ 18ನೇ ಪಾದಯಾತ್ರೆ ಬಂದು ತಲುಪಿತು.ದಾನೇಶ್ವರ ಶ್ರೀಗಳು ಮಾತನಾಡಿ ಪಾದಯಾತ್ರೆಯಲ್ಲಿ ಅಖಂಡವಾಗಿ ನಾಮಸ್ಮರಣೆ ಮಾಡುತ್ತಾ ಪಾಲ್ಗೊಳ್ಳುವುದರಿಂದ ಸಂಸಾರದ ಬಹುಸಾಗರ ದಾಟಲು ಸರಿಯಾದ ಮಾರ್ಗವಾಗುತ್ತದೆ. ಭಕ್ತಿ ಬೆಳೆದು ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಪಾದಯಾತ್ರೆ ಕೇವಲ ಸಮಯ ಕಳೆಯುವುದಕ್ಕೆ ಅಲ್ಲ ಸಜ್ಜನರ ಜೊತೆಗೂಡಿ ಗುರುಗಳ ಮತ್ತು ದೇವರ ನಾಮಸ್ಮರಣೆ ಮಾಡುತ್ತಾ ಅಂತಿಮ ಗುರಿ ಹೊಂದುವುದೇ ಪಾದಯಾತ್ರೆ ಉದ್ದೇಶ ಸಾಧು ಸತ್ಪರುಷರ ಅವತಾರಿಕರ ನಾಮಸ್ಮರಣೆಯಿಂದ ದಷ್ಟ ಶಕ್ತಿಗಳು ಕಣ್ಮರೆಯಾಗಿ ಶಿಷ್ಟ ಶಕ್ತಿಗಳು ಮಾತ್ರ ಉಳಿಯುತ್ತವೆ ಎಂದು ಅವರು ಹೇಳಿದರು.

ಸುಮಂಗಲಾತಾಯಿ ಪಾಟೀಲ ಮಾತನಾಡಿ ಅವತಾರಿಕರಲ್ಲಿ ವಿಶೇಷ ಜೀವಾತ್ಮ ಇರುತ್ತದೆ. ಅದಕ್ಕಾಗಿ ದಾನೇಶ್ವರ ಶ್ರೀಗಳಿಗೆ ಕಲಿಯುಗದ ಅವತಾರಿ ಪುರುಷ ಎಂಬ ಪ್ರಶಸ್ತಿ ಸಿಕ್ಕಿದ್ದು ಶ್ರೇಷ್ಠ. ಅವರಲ್ಲಿ ಸಂಕಲ್ಪ ಶಕ್ತಿ ಹಾಗೂ ಆತ್ಮವು ಬಹಳ ವಿಶೇಷವಾಗಿರುತ್ತದೆ. ಪಂಚರತ್ನಗಳು ಹಾಗೂ ಕಾಮದೇನು ಕಲ್ಪವೃಕ್ಷ ಅವರಲ್ಲಿ ಕ್ಷಮೆ ಗುಣ ಶ್ರೀದೇವಿ ಐಶ್ವರ್ಯ ಸಹಿತ ಇರುತ್ತದೆ. ಗುರುವಿನ ಉಪಕಾರ ತೀರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಡಾ. ಭರತ ಲೋನಾರಿ ಮಾತನಾಡಿ ಭಕ್ತರ ಕಷ್ಟ ಕಾರ್ಪಣ್ಯದಲ್ಲಿ ಕ್ಷಣಾರ್ಧದಲ್ಲಿ ಅಳಿಸಿ ಸುಖ ಜೀವನ ನಡೆಸುವ ಸಾಕ್ಷಾತ್ ನಡೆದಾಡುವ ದೇವರು ದಾನೇಶ್ವರ ಶ್ರೀಗಳು ಅವರೇ ಬಬಲಾದಿ ಸದಾಶಿವರು ಎಂದು ಹೇಳಿದರು. ಪಾದಯಾತ್ರೆಯಲ್ಲಿ ಅನೇಕ ಜಿಲ್ಲೆಗಳ ಹಾಗೂ ಮಹಾರಾಷ್ಟ್ರದ ಭಕ್ತರು ಕೂಡಾ ಭಾಗವಹಿಸಿದ್ದರು. ಸಂಗನಗೌಡ ಪಾಟೀಲ, ಗುರುಲಿಂಗಪ್ಪ ಮಹೇಶವಾಡಗಿ, ಎನ್.ಬಿ. ಕಾಡದೇವರ, ರುದ್ರಮುನಿ ಶ್ರೀಗಳು, ಯಾದವಾಡ ಸಂತರು ಅನೇಕರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin