ದಾನ ಪಡೆಯುವಾಗ ಕಾಲ್ತುಳಿತ ಉಂಟಾಗಿ 10 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Dhaka--01
ಢಾಕಾ, ಮೇ 15-ಉದ್ಯಮಿಯೊಬ್ಬರ ಮನೆ ಮುಂದೆ ದಾನ ಪಡೆಯಲು ನಿಂತಿದ್ದ ಸಾವಿರಾರು ಜನರ ನಡುವೆ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿ 10 ಮಹಿಳೆಯರು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಗ್ನೇಯ ಬಾಂಗ್ಲಾದೇಶದಲ್ಲಿ ನಿನ್ನೆ ಸಂಭವಿಸಿದೆ. ರಂಜಾನ್ ಉಪವಾಸಕ್ಕೆ ಮುನ್ನ ದಾನ ಸ್ವೀಕರಿಸಲು ಸಾಕಷ್ಟು ಜನರು ಜಮಾಯಿಸಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಚಿತ್ತಗಾಂಗ್ ಜಿಲ್ಲೆಯ ಉಕ್ಕು ಉದ್ಯಮಿ ಮನೆಯಲ್ಲಿ ಬಡವರಿಗೆ ವಸ್ತ್ರಗಳು ಮತ್ತಿತರ ವಸ್ತುಗಳನ್ನು ವಿತರಿಸಲಾಗುತ್ತಿತ್ತು. ಇವುಗಳನ್ನು ಪಡೆಯಲು ಸುಮಾರು 10 ಸಾವಿರ ಜನರು ಸೇರಿದ್ದರು. ಇವರಲ್ಲಿ ಬಹುತೇಕ ಮಂದಿ ಮಹಿಳೆಯರಾಗಿದ್ದರು. ಈ ಸಂದರ್ಭದಲ್ಲಿ ಜನರ ಗುಂಪಿನ ನಡುವೆ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿ ಕನಿಷ್ಠ ಹತ್ತು ಮಹಿಳೆಯರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡ 50ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Facebook Comments

Sri Raghav

Admin