ದಾಳಿಂಬೆ
ಈ ಸುದ್ದಿಯನ್ನು ಶೇರ್ ಮಾಡಿ

ದಾಳಿಂಬೆ – ವಿಟಮಿನ್ ಎ, ಸಿ, ಇ ಮತ್ತು ಫೋಲಿಕ್ ಆಮ್ಲದ ಉತ್ತಮ ಮೌಲ್ಯವನ್ನು ಹೊಂದಿರುತ್ತದೆ. ಇದು ಉತ್ತಮ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ಉದರ ದೋಷ, ಹೃದಯ ಸಮಸ್ಯೆ, ಕ್ಯಾನ್ಸರ್, ಹಲ್ಲು, ರಕ್ತ ಹೀನತೆ, ಡಯಾಬಿಟಿಸ್, ಸಂಧಿವಾತ, ಮೂತ್ರಪಿಂಡ ಸಮಸ್ಯೆ ಹಾಗೂ ವಿವಿಧ ರೀತಿಯ ಆರೋಗ್ಯ ತೊಂದರೆಗಳ ನಿಯಂತ್ರಣಕ್ಕೆ ದಾಳಿಂಬೆ ಸಹಕಾರಿ. ದ್ರಾಕ್ಷಾರಸ ಅಥವಾ ಗ್ರೀನ್ ಟೀನಲ್ಲಿರುವುದಕ್ಕಿಂತಲೂ ಹೆಚ್ಚಿನ ಉತ್ಕರ್ಷಣಗಳನ್ನು ಇದು ಹೊಂದಿದೆ. ಚೈತನ್ಯದಾಯಕ ಗುಣವುಳ್ಳ ಇದನ್ನು ಆರೋಗ್ಯದ ಶಕ್ತಿ ಕೇಂದ್ರ ಎಂದೂ ಕರೆಯಲಾಗುತ್ತದೆ.
ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರಲಿ, ಆ ಕಾಲದಲ್ಲಿ ಸಿಹಿ ದಾಳಿಂಬೆ ಸೇವಿಸುತ್ತ ಬಂದಲ್ಲಿ ರೋಗದಿಂದ ಬೇಗ ಮುಕ್ತರಾಗಬಹುದು. ಸಿಹಿ ದಾಳಿಂಬೆ ಹಣ್ಣಿನ ರಸ ಪಿತ್ತಶಾಮಕ ಗುಣವುಳ್ಳದ್ದು, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಕ್ರಿಯೆಗೆ ಚೈತನ್ಯ ತಂದುಕೊಡುತ್ತದೆ ಹಾಗೂ ರೋಗಿಯಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
Facebook Comments