ದಾವಣಗೆರೆಯಲ್ಲಿ ದ್ವಿತೀಯ ದರ್ಜೆ ಸಹಾಯಕನ ಮನೆ ಮೇಲೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ACB--01

ದಾವಣಗೆರೆ, ಏ.6- ವಾಣಿಜ್ಯ ತೆರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ವಿವಿಧ ದಾಖಲಾತಿಗಳನ್ನು ಪರಿಶೀಲಿಸಿದರು. ನಗರದ ಸರಸ್ವತಿ ಬಡಾವಣೆಯಲ್ಲಿ ವಾಸವಿರುವ ಕರಿಬಸಪ್ಪ ಎಂಬುವರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆಂಬ ಆರೋಪ ಇವರ ಮೇಲೆ ಕೇಳಿಬಂದಿತ್ತು.
ಇಂದು ಬೆಳಗ್ಗೆ ಡಿವೈಎಸ್‍ಪಿ ಕವಳಪ್ಪ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ಇವರ ಮೂರು ಅಂತಸ್ತಿನ ಮನೆ ಮೇಲೆ ದಾಳಿ ನಡೆಸಿ ವಿವಿಧ ದಾಖಲಾತಿಗಳ ಪರಿಶೀಲನೆ ನಡೆಸಿದರು.

ಇವರು ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ 8 ಎಕರೆ ಜಮೀನು, ಸರಸ್ವತಿ ಬಡಾವಣೆಯಲ್ಲಿ 3 ಮನೆ, ಮೌನೇಶ್ವರ ಬಡಾವಣೆಯಲ್ಲಿ 4 ಮನೆಗಳನ್ನು ಹೊಂದಿದ್ದು, ಈ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.  ಇದಲ್ಲದೆ, ನಗರದಲ್ಲಿ ಎರಡು ವಾಣಿಜ್ಯ ಮಳಿಗೆಗಳನ್ನೂ ಹೊಂದಿದ್ದು, ಒಂದು ಮಳಿಗೆಯನ್ನು ತಮ್ಮ ಮಗಳಿಗೆ ನೀಡಿದ್ದಾರೆ. ಜತೆಗೆ ನಗರದ ವಿವಿಧೆಡೆ 5 ನಿವೇಶನ ಹೊಂದಿರುವುದು ಎಸಿಬಿ ದಾಳಿಯಿಂದ ಬಹಿರಂಗಗೊಂಡಿದೆ.  ದಾಳಿ ವೇಳೆ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಕಾಶ್‍ಗೌಡ, ಸಿಬ್ಬಂದಿಗಳಾದ ಕಲ್ಲೇಶ್, ವೀರೇಶ್, ಉಮೇಶ್, ಮೋಹನ್ ಜತೆಯಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin