ದಾಹ ತಣಿಸಿಕೊಳ್ಳಲು ಬಂದ ಜಿಂಕೆ ಮುಳ್ಳಿನ ತಂತಿಗೆ ಸಿಲುಕಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

2ಮುಂಡಗೋಡ,ಮಾ.14- ದಾಹ ತಣಿಸಿಕೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿದ ಜಿಂಕೆಯೊಂದು ಅರಣ್ಯದ ಪಕ್ಕದಲ್ಲಿರುವ ಜಮೀನಿನ ಸುತ್ತ ಹಾಕಲಾದ ಮುಳ್ಳಿನ ತಂತಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಿನ್ನೆ ತಾಲೂಕಿನ ಅಂದಲಗಿ ಗ್ರಾಮದಲ್ಲಿ ನಡೆದಿದೆ.ನೀರನ್ನು ಅರಸಿ ಕಾಡಿನಿಂದ ತಾಲೂಕಿನ ಬ್ಯಾನಳ್ಳಿ ಗ್ರಾಮದ ಸಮೀಪ ಆಗಮಿಸಿದಾಗ ಬೀದಿ ನಾಯಿಗಳ ಕಣ್ಣಿಗೆ ಬಿದ್ದು ಅವುಗಳಿಂದ ತಪ್ಪಿಸಿಕೊಂಡು ಕಲಕೇರಿ ಗ್ರಾಮದ ಮೂಲಕ ಅಂದಲಗಿ ಗ್ರಾಮಕ್ಕೆ ಆಗಮಿಸಿದಾಗ ಅಲ್ಲಿನ ಮನೆಯೊಂದರ ತಡೆಗೋಡೆಗೆ ಹಾಕಲಾದ ತಂತಿ ಮತ್ತು ಅರಣ್ಯದಂಚಿನಲ್ಲಿರುವ ಜಮೀನಿನ ಸುತ್ತ ಹಾಕಲಾದ ಮುಳ್ಳಿನ ತಂತಿಯನ್ನು ದಾಟಲು ಹೋಗಿ ತೀವ್ರ ಗಾಯಗೊಂಡಿರುವುದರಿಂದ ಜಿಂಕೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದೆ.ತೀವ್ರ ಗಾಯಗೊಂಡಿರುವ ಜಿಂಕೆಯನ್ನು ಕಂಡ ಅಲ್ಲಿನ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಷಯ ತಿಳಿಸಿದಾಗ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಶು ವೈದ್ಯರನ್ನು ಕರೆಯಿಸಿ ಸಾವನ್ನಪ್ಪಿದ ಜಿಂಕೆಯನ್ನು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯ ಸಂಸ್ಕಾರ ನೆರವೇರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin