ದಿಡಗಿನ ಬಸವೇಶ್ವರ ಬೇಡಿ ಬಂದ ಭಕ್ತರ ಬಯಕೆ ಈಡೇರಿಸುತ್ತಿದ್ದಾನೆ

ಈ ಸುದ್ದಿಯನ್ನು ಶೇರ್ ಮಾಡಿ

belagam-2

ಅಮೀನಗಡ,ಆ.30- ಕ್ಷೇತ್ರವೊಂದು ಬೆಳೆಯಲು ಏರು, ಮೇರು ಹಾಗೂ ನೀರನ್ನು ಹೊಂದಿರಬೇಕು. ಆ ಎಲ್ಲವನ್ನೂ ಹೊಂದಿದ ಸುಕ್ಷೇತ್ರ ದಿಡಗಿನ ಬಸವೇಶ್ವರ ಬೇಡಿ ಬಂದ ಭಕ್ತರ ಬಯಕೆ ಈಡೇರಿಸುತ್ತಿದ್ದಾನೆ ಎಂದು ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮಿಜಿ ತಿಳಿಸಿದರು. ಸಮೀಪದ ಧಮ್ಮೂರ ಗ್ರಾಮದ ದಿಡಗಿನ ಬಸವೇಶ್ವರ ದೇವಸ್ಥಾನದ ನೂತನ ರಥೋತ್ಸವ ಉದ್ಘಾಟನೆ ನಿಮಿತ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರವೊಂದು ಪಾವನವೆನಿಸಿಕೊಳ್ಳಲು ಭಕ್ತರು ಅದನ್ನು ಏರಿ ಹೋಗು ವಂತಿರಬೇಕು. ಅದರೊಂದಿಗೆ ಅದು ಎತ್ತರದಲ್ಲಿರಬೇಕು. ಜತೆಗೆ ನೀರು ಹೊಂದಿರಬೇಕು. ದಿಡಗಿನ ಬಸವಣ್ಣ ಇದೆಲ್ಲವನ್ನು ಹೊಂದಿದ್ದು, ಭಕ್ತರ ಬಯಕೆ ಈಡೇರಿಸುವಂತವನಾಗಿದ್ದಾನೆ ಎಂದರು.

ಗೃಹಮಂಡಳಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಸದಸ್ಯ ಶಶಿಕಾಂತ ಪಾಟೀಲ, ಆರ್.ಪಿ. ಕಲಬುರ್ಗಿ ಮಾತನಾಡಿದರು. ಶಾಸಕ ಡಾ. ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ತಿಂಥಣಿ ಬ್ರಿಡ್ಜ್‍ನ ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದಪುರಿ ಸ್ವಾಮಿಜಿ, ಅಂಕಲಿಮಠದ ಸ್ವಾಮಿಜಿ, ಚಳಗೇರಿ ವಿರುಪಾಕ್ಷ ಸ್ವಾಮಿಜಿ, ಕಮತಗಿ ಹುಚ್ಚೇಶ್ವರ ಸ್ವಾಮಿಜಿ, ಲಿಂಗಾನಂದ ಸ್ವಾಮಿಜಿ, ಆಧ್ಯಾತ್ಮ ಚಿಂತಕ ಪ್ರದೀಪ ಗುರೂಜಿ, ಲಕ್ಷ್ಮಣ ಗುರೂಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸ್ಥಾನ ರಥದ ಕೊಡುಗೆ ನೀಡಿದ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ಎಂ.ಎಲ್. ಶಾಂತಗೇರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ದೇವಸ್ಥಾನಕ್ಕೆ ರಥದ ಹರಕೆ ಹೊತ್ತುಕೊಂಡಿದ್ದೆ. ಅದು ಈಡೇರಿದ್ದರಿಂದ ದೇವಸ್ಥಾನಕ್ಕೆ ಸಾಗುವಾಣಿ ಕಟ್ಟಿಗೆಯ ರಥದ ಹರಕೆ ತೀರಿಸಿದ್ದೇನೆ ಎಂದರು. ಜಿಪಂ ಸದಸ್ಯೆ ಚಂದ್ರವ್ವ ಓಲೇಕಾರ, ಮಾಜಿ ಸದಸ್ಯೆ ರೇಣುಕಾ ಶಾಂತಗೇರಿ, ಬಸಪ್ಪ ಆಲೂರ, ತಾಪಂ ಸದಸ್ಯ ಮಂಜುನಾಥ ಗೌಡರ, ನಾಗೇಶ ಗಂಜಿಹಾಳ, ಪಿಡಿಒ ಎಂ.ಎಚ್.ಕೋಟಿ, ಅಪ್ಪಾಸಾಹೇಬ ನಾಡಗೌಡರ, ಮಹಿಬೂಬ ಆರಿ, ಖಾಜೇಸಾಬ ಬಾಗವಾನ, ಮುತ್ತಣ್ಣ ಬೆಣ್ಣೂರ, ಹನಮವ್ವ ಗೌಡರ, ಶರಣಪ್ಪ ಹುಲ್ಯಾಳ, ಮಹಾಂತೇಶ ಹುಲ್ಯಾಳ, ತೊಟ್ಲಪ್ಪ ತೊಟ್ಲಪ್ಪನವರ, ಎಂ.ಎಸ್.ರೊಟ್ಟಿ, ಮಹಾಂತಪ್ಪ ಭದ್ರಣ್ಣವರ, ನಿಂಗಪ್ಪ ಗುರಿಕಾರ ಸೇರಿದಂತೆ ಇತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin