ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ತುಮಕೂರು ಉಪಮೇಯರ್ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

Tumakuru

ತುಮಕೂರು, ಆ.28-ಮಹಾನಗರ ಪಾಲಿಕೆಯ 3ನೇ ಅವಧಿ ಅಧಿಕಾರ ಪೂರ್ಣಗೊಳ್ಳಲು ಇನ್ನು 6 ತಿಂಗಳು ಬಾಕಿ ಇರುವಾಗಲೇ ದಿಢೀರ್ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ನಡೆದ ಮಹಾನಗರ ಉಪಮೇಯರ್ ಸ್ಥಾನಕ್ಕೆ ಎಚ್.ರವಿಕುಮಾರ್(ಗಡ್ಡರವಿ) ರಾಜೀನಾಮೆ ನೀಡಿದ್ದಾರೆ.   ಮೇಯರ್ ಯಶೋಧಮ್ಮ ಅವರಿಗೆ ರವಿಕುಮಾರ್ ರಾಜೀನಾಮೆ ಸಲ್ಲಿಸಿರುವುದು ರಾಜಕೀಯ ವಲದಯ್ಲಲಿ ಕುತೂಹಲ ಕೆರಳಿಸಿದ್ದು, ರಾಜೀನಾಮೆಯನ್ನು ಅಂಗೀಕರಿಸಿರುವ ಮೇಯರ್ ಕೂಡಲೇ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲು ಪ್ರಾಧಿಕಾರಕ್ಕೆ ವರದಿ ನೀಡಲು ಆಯುಕ್ತರಿಗೆ ಸೂಚಿಸಿದ್ದಾರೆ.   ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ: ಕಳೆದ ಫೆಬ್ರವರಿ 10ರಂದು 3ನೇ ಅವಧಿಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು , ಅಧಿಕಾರ ಹಂಚಿಕೊಂಡಿದ್ದರು. ಅದರಂತೆ ಮೇಯರ್ ಆಗಿ 34ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಯಶೋಧಮ್ಮ ಉಪಮೇಯರ್ ಆಗಿ, 22ನೇ ವಾರ್ಡ್ನ ಜೆಡಿಎಸ್ನ ಸದಸ್ಯರಾದ ಎಚ್.ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದರು.

ಜೆಡಿಎಸ್ ಆಂತರಿಕ ಒಪ್ಪಂದ:
ಉಪಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು , ಪಕ್ಷದ ಆಂತರಿಕ ಒಪ್ಪಂದದಂತೆ 6-6 ತಿಂಗಳಿಗೆ ಅಧಿಕಾರವನ್ನು ಹಂಚಿಕೆ ಮಾಡಿಕೊಳ್ಳಲಾಗಿತ್ತು. ಹಾಗಾಗಿ ಪರಿಶಿಷ್ಟ ಪಂಗಡಕ್ಕೆ ಆಗಲೂ ಬಿಟ್ಟು ಕೊಡಲಾಗಿತ್ತು. ಹಾಗಾಗಿ ಈಗ 6 ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಉಳಿದ 6 ತಿಂಗಳಿಗೆ ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ ಆ ಸ್ಥಾನ ನೀಡಲು ಒಪ್ಪಂದವಾದಂತೆ ಈಗ ಬೇರೆಯವರಿಗೆ ನೀಡಬೇಕಿದೆ.  ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ನಿವಾಸದಲ್ಲಿ ಒಪ್ಪಂದ ನಡೆದಿತ್ತು. ಉಪಮೇಯರ್ ಸ್ಥಾನಕ್ಕೆ ಭಾರೀ ಪೈಪೋಟಿ ನೀಡಿದ ಟಿ.ಆರ್.ನಾಗರಾಜ್ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರು ಎಚ್.ಡಿ.ರೇವಣ್ಣ, ಶಾಸಕರು ಸೇರಿದಂತೆ ಇತರೆ ಕೃಪಾಕಟಾಕ್ಷ ಅವರ ಮೇಲಿತ್ತು.
ಆದರೆ ಶಾಸಕ ಎಸ್.ಅರ್.ಶ್ರೀನಿವಾಸ್ ಅವರ ಪತ್ನಿ ಭಾರತಿ ಶ್ರೀನಿವಾಸ್ ಅವರು, ರವಿಕುಮಾರ್ಗೆ ಉಪಮೇಯರ್ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಜೆಡಿಎಸ್ ವರಿಷ್ಠರಿಂದ ಭಾರೀ ಒತ್ತಡ ಬಂದರೂ ಕೂಡ ಭಾರತೀ ಶ್ರೀನಿವಾಸ್ ಕ್ಯಾರೆ ಎಂದಿರಲಿಲ್ಲ.  ರವಿಕುಮಾರ್ ಅವರನ್ನೇ ಉಪಮೇಯರ್ ಮಾಡುವಲ್ಲಿ ಯಶಸ್ಸು ಕಂಡಿದ್ದರು. ಆ ಸಂದರ್ಭದಲ್ಲಿ ನಾಗರಾಜ್ ಅವರಿಗೆ ಉಪಮೇಯರ್ ಸ್ಥಾನ ಕೈತಪ್ಪಿತ್ತು. ಈ ಬಾರಿಯಾದರೂ ರವಿಕುಮಾರ್ ರಾಜೀನಾಮೆ ನೀಡುವುದರ ಹಿನ್ನೆಲೆಯಲ್ಲಿ ಈ ಬಾರಿಯಾದರೂ ನಾಗರಾಜ್ ಅವರಿಗೆ ಸ್ಥಾನ ಲಭಿಸುವುದೇ…

ಉಪಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳು:
ಜೆಡಿಎಸ್ ಪಕ್ಷದಿಂದ ಪ್ರೆಸ್ ರಾಜಣ್ಣ, ಲೋಕೇಶ್ವರ್ , ಪಿ.ಎಚ್.ವಾಸುದೇವ್, ನಾಗರಾಜ್ ಸೇರಿದಂತೆ ಇತರರು ಕಣ್ಣಿಟ್ಟಿದ್ದು , ಜೆಡಿಎಸ್ ಪಕ್ಷದ ವರಿಷ್ಠರ ಯಾರ ಮೇಲೆ ಕೃಪಾಕಟಾಕ್ಷ ತೋರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ನಾವೇನು ಕಮ್ಮಿಯೇ ಎಂದು ಕೇಂದ್ರ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಉಪಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಒಟ್ಟಾರೆ ಭಾರೀ ಕುತೂಹಲ ಕೆರಳಿಸಿದ್ದು ರಾಜಕೀಯ ಚಟುವಟಿಕೆಗಳು ರಂಗೇರಿದೆ.   ಜೆಡಿಎಸ್ ಪಕ್ಷದ 13(ಎಂಎಲ್ಸಿ ಸೇರಿ), ಕಾಂಗ್ರೆಸ್ 14(ಎಂಪಿ, ಎಂಎಲ್ಎ ಸೇರಿ), ಬಿಜೆಪಿ 8, ಒಟ್ಟು 35, ಇಬ್ಬರು ಪಕ್ಷೇತರರು.

► Follow us on –  Facebook / Twitter  / Google+

Facebook Comments

Sri Raghav

Admin