ದಿನಕರನ್ ಬಂಧನ ನಂತರ ಎಐಎಡಿಎಂಕೆ 2 ಬಣಗಳ ವಿಲೀನ ಪ್ರಕ್ರಿಯೆ ಚುರುಕು

ಈ ಸುದ್ದಿಯನ್ನು ಶೇರ್ ಮಾಡಿ

dinakaran
ಚೆನ್ನೈ, ಏ.26- ಎಐಎಡಿಎಂಕೆ ಉಭಯ ಬಣಗಳಿಂದ ತಿರಸ್ಕರಿಸಲ್ಪಟ್ಟ ಮಾಜಿ ಉಪ ಮಹಾ ಪ್ರಧಾನ ಕಾರ್ಯದರ್ಶಿ ದಿನಕರನ್ ಬಂಧನದ ನಂತರ ವಿಲೀನ ಪ್ರಕ್ರಿಯೆ ಚುರುಕುಗೊಂಡಿದೆ.ಚೆನ್ನೈನಲ್ಲಿಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಎರಡೂ ಬಣಗಳ ಮುಖಂಡರು ಪಾಲ್ಗೊಂಡರು. ಈ ಮೂಲಕ ವಿಲೀನ ಪ್ರಕ್ರಿಯೆಗೆ ಮತ್ತಷ್ಟು ವೇಗ ದೊರೆತಿದೆ.ಮುಖಂಡರಾದ ವಿಶ್ವನಾಥನ್, ಕಾರ್ತಿ ಕೇಯನ್, ಪಾಂಡಿರಾಜನ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಹರಿದು ಹಂಚಿ ಹೋಗಿದ್ದ ಎಐಎಡಿಎಂಕೆ ಉಭಯ ಬಣಗಳು ಒಗ್ಗೂಡುವ ಪ್ರಕ್ರಿಯೆಗೆ ಚಾಲನೆ ದೊರೆತಿರುವ ಸಂದರ್ಭದಲ್ಲೇ ಇದಕ್ಕೆ ಪೂರಕವಾದ ಬೆಳವಣಿಗೆಗಳು ಕಂಡು ಬರುತ್ತಿವೆ.ಇಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ (ಈಗ ಜೈಲಿನಲ್ಲಿರುವ) ಶಶಿಕಲಾ ನಟರಾಜನ್ ಅವರ ಬ್ಯಾನರ್‍ಗಳು ಮತ್ತು ಪೋಸ್ಟರ್ ಗಳನ್ನು ಇಂದು ಬೆಳಗ್ಗೆ ಕಿತ್ತೆಸೆಯಲಾಗಿದೆ.  ಪಕ್ಷದ ಕಚೇರಿಯ ಪಾವಿತ್ರ್ಯತೆಯನ್ನು ಕಾಪಾಡಲು ಇಂಥ ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣ ಆಗ್ರಹಿಸಿದ ಮರುದಿನವೇ ಈ ಬೆಳವಣಿಗೆಯಾಗಿದೆ. ಪಕ್ಷದ ಕೇಂದ್ರ ಕಚೇರಿಯಿಂದ ಶಶಿಕಲಾ ಬ್ಯಾನರ್‍ಗಳನ್ನು ತೆಗೆದು ಹಾಕಿರುವ ಕ್ರಮವನ್ನು ಸೆಲ್ವಂ ಬಣ ಸ್ವಾಗತಿಸಿದ್ದು, ಇದೊಂದು ಪೂರಕ ಹೆಜ್ಜೆ ಎಂದು ಬಣ್ಣಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin