ದಿನಕ್ಕೊಂದು ಅಡಗುತಾಣ ಬದಲಿಸುತ್ತಿರುವ ಬಾಂಬ್ ನಾಗನಿಗಾಗಿ ಪೊಲೀಸರಿಂದ ವ್ಯಾಪಕ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01
ಬೆಂಗಳೂರು, ಏ.17-ಪೊಲೀಸರ ದಾಳಿ ವೇಳೆ ಪರಾರಿಯಾಗಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ ಅಲಿಯಾಸ್ ಬಾಂಬ್ ನಾಗ ಪ್ರತಿದಿನ ತನ್ನ ಅಡಗುತಾಣ ಬದಲಿಸುತ್ತಿದ್ದಾನೆಂದು ಗೊತ್ತಾಗಿದೆ.ಪೊಲೀಸರ ಚಲನವಲನ ಗಮನಿಸುತ್ತಿರುವ ಈತ ಅಡಗುತಾಣ ಬದಲಿಸುತ್ತಿರುವುದರಿಂದ ಇನ್ನೂ ಸಿಕ್ಕಿಬಿದ್ದಿಲ್ಲ ಎನ್ನಲಾಗಿದೆ.ಈತನ ಬಂಧನಕ್ಕಾಗಿ ರಚಿಸಲಾಗಿರುವ 4 ವಿಶೇಷ ಪೊಲೀಸ್ ತಂಡಗಳು ವ್ಯಾಪಕ ಶೋಧ ನಡೆಸುತ್ತಿದ್ದರೂ ಆತನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ ನಾಗ ಶರಣಾಗತಿಗೆ ಮುಂದಾಗಿದ್ದಾನೆ ಎಂದು ಗೊತ್ತಾಗಿದೆ. ಆದರೆ ಎಲ್ಲಿ ಯಾವಾಗ ಶರಣಾಗುತ್ತಾನೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.ಪೊಲೀಸರು ಮನೆ ಮೇಳೆ ದಾಳಿ ಮಾಡುವ ಮೊದಲೇ ಬಾಂಬ್ ನಾಗ ಪರಾರಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಈತನ ಮನೆ ಮೇಲೆ ದಾಳಿ ನಡೆಯುವ ಬಗ್ಗೆ ಪೊಲೀಸರಿಂದಲೇ ಮಾಹಿತಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆಯಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin