ದಿಲೀಪ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

DilipKumar

ಮುಂಬೈ, ಡಿ.8-ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಚಿತ್ರನಟ ದಿಲೀಪ್ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅವರು ಗುಣಮುಖರಾಗಿದ್ದಾರೆ. ನಿನ್ನೆಗಿಂತಲೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು ಮತ್ತು ನಾಳೆ ಅವರು ಆಸ್ಪತ್ರೆಯಲ್ಲಿ ವಿಶಾಂತ್ರಿ ಪಡೆಯಲಿದ್ದಾರೆ. ಅವರನ್ನು ವೈದ್ಯರು ಉತ್ತಮ ರೀತಿಯಲ್ಲಿ ಆರೈಕೆ ಮಾಡುತ್ತಿದ್ದಾರೆ. ಅವರು ಲಘು ಉಪಹಾರ ಮತ್ತು ಚಹಾ ಸೇವಿಸಿದರು. ಆರೋಗ್ಯ ಸುಧಾರಿಸುತ್ತಿದೆ ಎಂದು ದಿಲೀಪ್‍ರ ಪತ್ನಿ-ಹಿರಿಯ ನಟಿ ಸಾಯಿರಾ ಬಾನು ತಿಳಿಸಿದ್ದಾರೆ.

ಬಲಗಾಲಿನಲ್ಲಿ ತೀವ್ರ ಊತ ಕಂಡು ಬಂದ ಹಿನ್ನೆಲೆಯಲ್ಲಿ 93 ವರ್ಷದ ಹಿರಿಯ ಅಭಿನೇತನನ್ನು ಮಂಗಳವಾರ ಬೆಳಿಗ್ಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆರು ದಶಕಗಳ ಬಣ್ಣದ ಬದುಕಿನಲ್ಲಿ ದಿಲೀಪ್ ಕುಮಾರ್ ಮಧುಮತಿ, ದೇವದಾಸ್, ಮೊಘಲ್-ಎ-ಅಜಾಮ್ , ಗಂಗಾ ಜಮುನಾ, ರಾಮ್ ಔರ್ ಶಾಮ್ ಮತ್ತು ಕರ್ಮ ಸಿನಿಮಾಗಳಂಥ ಸೂಪರ್‍ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 1994ರಲ್ಲಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಮತ್ತು 2015ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin