ದಿಶಾ ಪಟಾನಿ ಜೊತೆ ಟೈಗರ್ ಲವ್ವಿಡವ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Disha

ಬಾಲಿವುಡ್‌ನ ಕಟ್ಟುಮಸ್ತಾದ ನಟ, ಮಾರ್ಷಲ್ ಆರ್ಟಿಸ್ಟ್ ಟೈಗರ್ ಶ್ರಾಫ್ ಮತ್ತು ರೂಪದರ್ಶಿ, ಉದಯೋನ್ಮುಖ ತಾರೆ ದಿಶಾ ಪಟಾನಿ ನಡುವೆ ಲವ್ವಿಡವ್ವಿ ಶುರುವಾಗಿದೆಯೇ ? ಹಾಗಂತ ರೂಮರ್‌ಗಳು ಬಿ ಟೌನ್‌ನಲ್ಲಿ ಹಬ್ಬಿದೆ.  ತಮ್ಮಿಬ್ಬರ ಸಂಬಂಧದ ಬಗ್ಗೆ ಟೈಗರ್ ಆಗಲಿ ಅಥವಾ ದಿಶಾ ಆಗಲಿ ಒಪ್ಪಿಕೊಂಡಿಲ್ಲ. ಆದರೆ ಇವರಿಬ್ಬರು ಒಟ್ಟಿಗೆ ಗುಪ್ತ ಸ್ಥಳದಲ್ಲಿ ಇದ್ದದ್ದು ದೃಢಪಟ್ಟಿದ್ದು, ಹಬ್ಬಿರುವ ಪುಕಾರಿಗೆ ತುಪ್ಪ ಸುರಿದಿದೆ. ಈ ಜೋಡಿ ? befikra ಈ ಮೂಸಿಕ್ ವಿಡಿಯೋದಲ್ಲಿ ಕಂಡುಬಂದಿದ್ದಾರೆ. ಅಲ್ಲದೇ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ತಮ್ಮ ಪ್ರವಾಸದ ಚಿತ್ರಗಳನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಡಿದ್ದಾರೆ. ಟೈಗರ್ ಸಿಕ್ಸ್‌ಪ್ಯಾಕ್‌ನಲ್ಲಿರುವ ಹಾಗೂ ದಿಶಾ ಟು ಪೀಸ್‌ನಲ್ಲಿರುವ ಚಿತ್ರಗಳು ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿವೆ.
ಫೋಟೊಗಳು ಬೇರೆ ಬೇರೆಯಾದರೂ ಸ್ಥಳದ ಹಿನ್ನೆಲೆ ಒಂದೇ ಆಗಿರುವುದು ವಿಶೇಷ !. ಇವರು ಮ್ಯೂಸಿಕ್ ವಿಡಿಯೋಗಾಗಿ ಹೋಗಿರುವ ಸ್ಥಳದ ಬಗ್ಗೆಯಾಗಲಿ ಅಥವಾ ಅಲ್ಲಿ ನಡೆದಿರಬಹುದಾದ ಶೂಟಿಂಗ್ ಬಗ್ಗೆಯಾಗಲಿ ಎಲ್ಲವೂ ಗುಪ್ತ್ ಗುಪ್ತ್. ಈಗ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ ಟೈಗರ್ ನೀ ಹೋಗಿದ್ದು ಎಲ್ಲಿಗೆ..? ಏಕೆ ಎನ್ನುವ ಪ್ರಶ್ನೆಗೆ ಬಾಲಿವುಡ್‌ನ ಈ ಉದಯೋನ್ಮುಖ ತಾರೆಯರೇ ಉತ್ತರಿಸಬೇಕು.

► Follow us on –  Facebook / Twitter  / Google+

Facebook Comments

Sri Raghav

Admin