ದಿಶಾ ಪಟಾನಿ ಪರಿಪೂರ್ಣ ಫಿಟ್‍ನೆಸ್ ಮಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

disha-pattani

ಬಾಲಿವುಡ್‍ನ ಉದಯೋನ್ಮುಖ ತಾರೆಯರು ಅಭಿನಯದ ಜೊತೆ ಜೊತೆಗೆ ಫಿಟ್‍ನೆಸ್‍ಗೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದಕ್ಕೆ ದಿಶಾ ಪಟಾನಿ ಕೂಡ ಹೊರತಾಗಿಲ್ಲ. ಸುಶಾಂತ್ ಸಿಂಗ್ ರಜಪೂತ್ ನಿರ್ದೇನದ ಎಂ.ಎಸ್.ಧೋನಿ : ದಿ ಅನ್‍ಟೋಲ್ಡ್ ಸ್ಟೋರಿ ಸಿನಿಮಾ ಮೂಲಕ ಬಾಲಿವುಡ್‍ನಲ್ಲಿ ಅಂಬೆಗಾಲಿಡುತ್ತಿರುವ ದಿಶಾ ಪರಿಪೂರ್ಣ ಫಿಟ್‍ನೆಸ್ ಮೈಮಾಟ ಹೊಂದಿರುವ ಕಿಶೋರಿ. ಆರೋಗ್ಯ, ಫಿಟ್‍ನೆಟ್ ಮತ್ತು ಡಯಟ್ ಬಗ್ಗೆ ಈಕೆ ಮಾತನಾಡಿದ್ದಾಳೆ. ಆರೋಗ್ಯವೇ ಭಾಗ್ಯ, ಅನಾರೋಗ್ಯವೇ ದೌರ್ಭಾಗ್ಯ ಎಂಬ ಮಾತುಗಳಲ್ಲಿ ಪಟಾನಿಗೆ ಬಲವಾದ ನಂಬಿಕೆ. ಪ್ರತಿಯೊಬ್ಬರ ಜೀವನದಲ್ಲೂ ಆರೋಗ್ಯ ಎಷ್ಟು ಮುಖ್ಯ. ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ವಿವರಿಸಿದ್ದಾಳೆ.

ಫಿಟ್‍ನೆಸ್ ಎಂಬ ಪದವನ್ನು ವ್ಯಾಖ್ಯಾನಿಸಿರುವ ಆಕೆ, ಕ್ರಿಯಾಶೀಲವಾಗಿರುವುದು ಹಾಗೂ ನೀಡಲಾದ ಸಮಯದಲ್ಲಿ ಒಂದು ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಮರ್ಥವಾಗಲು ಇದು ನೆರವಾಗುತ್ತದೆ. ನಾನು ಶಾಲಾ-ಕಾಲೇಜು ದಿನಗಳಲ್ಲಿ ನೃತ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯಳಾಗಿದ್ದ ಕಾರಣ ಪರಿಪೂರ್ಣ ಫಿಟ್‍ನೆಸ್ ಹೊಂದಲು ಸಹಕಾರಿಯಾಗಿದೆ ಎನ್ನುತ್ತಾಳೆ. ತನ್ನ ಫಿಟ್‍ನೆಸ್ ದಿನಚರಿ ಮತ್ತು ಕಸರತ್ತು ಮಾಡುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದಾಳೆ. ಡ್ಯಾನ್ಸ್, ಜಿಮ್ನಾಸ್ಟಿಕ್, ಜಿಮ್‍ನಲ್ಲಿ ಬೆವರಿಳಿಸುವುದು ಈಕೆಯ ಪ್ರತಿನಿತ್ಯದ ಕಾಯಕಗಳಲ್ಲಿ ಒಂದು. ಬಿಡುವು ಮಾಡಿಕೊಂಡು ಯೋಗಾಸನವನ್ನೂ ಮಾಡುತ್ತಾಳೆ. ಅತಿ ಶೀಘ್ರದಲ್ಲೇ ಮ್ಯಾರಥಾನ್ ಓಟದಲ್ಲಿ ಭಾಗವಹಿಸಬೇಕೆಂಬ ಹಂಬಲ ಈಕೆಯದ್ದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin