ದೀಪಕ್‍ ನನ್ನ ಕೊಂದ ಕೊಲೆಗಡುಕರನ್ನು ಮಟ್ಟ ಹಾಕುತ್ತೇವೆ : ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

Khadar-Minister

ಮಂಗಳೂರು, ಜ.5- ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಕೊಲೆಯನ್ನು ಉಗ್ರವಾಗಿ ಖಂಡಿಸುತ್ತೇವೆ ಮತ್ತು ಕೊಲೆಗಾರರನ್ನು ಮಟ್ಟ ಹಾಕುತ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.  ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಪ್ರಕರಣಗಳಲ್ಲಿ ರಾಜಕೀಯ ಮಾಡುವುದು ಸಮಂಜಸವಲ್ಲ. ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಸಮಸ್ಯೆಯನ್ನು ಬಗೆಹರಿಸಬೇಕು. ಕೊಲೆಗಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ. ಪ್ರಕರಣದ ತನಿಖೆಗೆ ಎಲ್ಲ ಸಹಕಾರ ಕೊಡುತ್ತೇವೆ. ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಂಶ ಹೊರಬರಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಪರಿಹಾರ ನೀಡಿದ ತಕ್ಷಣ ಪೊಷಕರ ನೋವು ಕಡಿಮೆಯಾಗುವುದಿಲ್ಲ ಎಂದು ಹೇಳಿದರು.

ಇಲಿಯಾಸ್ ಎಂಬುವರೊಂದಿಗೆ ನನ್ನ ಫೋಟೋ ಇದೆ ಎಂದು ಅಪಪ್ರಚಾರ ಮಾಡಿ ರಾಜಕೀಯ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ದೀಪಕ್ ರಾವ್ ಕೊಲೆ ಪ್ರಕರಣ ದಾರಿ ತಪ್ಪುವ ಸಾಧ್ಯತೆ ಇದೆ. ಒಬ್ಬನ ಜತೆ ಊಟ ಮಾಡಿದನೆಂದು ಅಪಪ್ರಚಾರ ಮಾಡುವುದು ಸರಿಯಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುವುದು ಖಂಡನೀಯ. ನನ್ನ ಮನೆಯವರು ತಪ್ಪು ಮಾಡಿದರೂ ನಾನು ಕ್ಷಮಿಸುವುದಿಲ್ಲ. ಇಲಿಯಾಸ್ ಎಂಬುವವನು ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ಹಲ್ಲೆ ನಡೆಸಿದ್ದ ಎಂದು ಹೇಳಿದರು.

Facebook Comments

Sri Raghav

Admin