ದೀಪಾವಳಿ ಅಂಚೆಚೀಟಿ ವಿತರಣೆಗೆ ಕೈಜೋಡಿಸಿದ 20 ದೇಶಗಳು : 1,70,000 ಅಂಚೆಚೀಟಿ ಮಾರಾಟ

ಈ ಸುದ್ದಿಯನ್ನು ಶೇರ್ ಮಾಡಿ

Diwali-Stamp

ನ್ಯೂಯಾರ್ಕ್, ನ.30-ಭಾರತದ ಅತ್ಯಂತ ಮಹತ್ವದ ಬೆಳಕಿನ ಹಬ್ಬ ದೀಪಾವಳಿ ಈಗ ವಿಶ್ವ ಮಾನ್ಯತೆ ಗಳಿಸಿದೆ. ಅಮೆರಿಕದಿಂದ ದೀಪಾವಳಿ ಅಂಚೆ ಚೀಟಿ ವಿತರಣೆ ಸಂಭ್ರಮದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎರಡು ಕಾಯಂ ಸದಸ್ಯ ದೇಶಗಳಾದ ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ ಸೇರಿದಂತೆ 20 ರಾಷ್ಟ್ರಗಳು ಪಾಲ್ಗೊಳ್ಳಲಿವೆ.  ಇದೇ ವೇಳೆ ಈವರೆಗೆ 1,70,000 ಸ್ಟ್ಯಾಂಪುಗಳು ಮಾರಾಟವಾಗಿದ್ದು, ಇದು ಭಾರತದ ಸಾಂಸ್ಕøತಿಕ ಪ್ರತಿಷ್ಠೆಗೆ ಮತ್ತೊಂದು ಹಿರಿಮೆಯಾಗಿದೆ. ನ್ಯೂಯಾರ್ಕ್‍ನ ವಿಶ್ವಸಂಸ್ಥೆಯ ಟ್ರಸ್ಟಿಶಿಪ್ ಕೌನ್ಸಿಲ್ ಚೇಂಬರ್‍ನಲ್ಲಿ ಡಿಸೆಂಬರ್ 5ರಂದು ದೀಪಾವಳಿ ಅಂಚೆ ಚೀಟಿ ಸಮರ್ಪಣಾ ಸಮಾರಂಭ ನಡೆಯಲಿದೆ. ವಿಶ್ವಸಂಸ್ಥೆ ಕಾರ್ಯಾಲಯಕ್ಕೆ ಭಾರತ ಮತ್ತು ಬೆಲಾರಸ್‍ನ ಶಾಶ್ವತ ಕಾರ್ಯಕ್ರಮದ ಸಹಯೋಗದಲ್ಲಿ ನಡೆಯಲಿರುವ ಈ ವಿಶೇಷ ಸಮಾರಂಭಕ್ಕೆ ಪ್ಯಾಲೆಸ್ತೀನ್ ಶಾಶ್ವತ ವೀಕ್ಷಣಾ ಕಾರ್ಯಕ್ರಮವು ಸಾಥ್ ನೀಡುತ್ತಿದೆ.

ಈ ಸಮಾರಂಭಕ್ಕೆ ಅಜರ್‍ಬೈಜಾನ್, ಸೈಪ್ರಸ್, ಜಾರ್ಜಿಯಾ, ಜರ್ಮನಿ, ಹೊಂಡುರಸ್, ಇಸ್ರೇಲ್, ಕಝಕ್‍ಸ್ತಾನ್, ಕುವೈತ್, ಮಾಲ್ಡೋವಾ, ಮೊರೊಕೋ, ಪನಾಮ, ಶ್ರೀಲಂಕಾ, ಟುನಿಷ್ಯಾ, ಉಕ್ರೇನ್ ಮತ್ತು ವಿಯಟ್ನಾಂ ದೇಶಗಳು ಕೈಜೋಡಿಸಿವೆ. ಇದೇ ಕಾರ್ಯಕ್ರಮದಲ್ಲಿ ದೀಪಾವಳಿ ಅಂಚೆಚೀಟಿ ಯೋಜನೆಯ ಅಧ್ಯಕ್ಷ ರಂಜು ಬಾತ್ರಾ ಅವರನ್ನು ಗೌರವಿಸಲಾಗುವುದು. ಈವರೆಗೆ ವಿವಿಧ ದೇಶಗಳಲ್ಲಿ 1,70,000 ದೀಪಾವಳಿ ಅಂಚೆ ಚೀಟಿಗಳು ಮಾರಾಟವಾಗಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin