ದೀಪಾವಳಿ ವೇಳೆ ಯೋಧರಿಗಾಗಿ #Sandesh2Soldiers ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

Sandesh2Soldires

ನವದೆಹಲಿ ಅ.23 : ಭಾರತೀಯ ಸೇನಾಪಡೆಯ ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಹಾಗೂ ದೇಶದ ಜನರು ಮತ್ತು ಸೇನಾಪಡೆಯ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ #Sandesh2Soldiers (ಸೈನಿಕರಿಗೆ ಸಂದೇಶ) ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಅಭಿಯಾನದ ಮೂಲಕ ದೀಪಾವಳಿ ಹಬ್ಬದ ಆಚರಣೆ ವೇಳೆ ಯೋಧರಿಗೆ ಸಂದೇಶಗಳನ್ನು ಮತ್ತು ಪತ್ರಗಳನ್ನು ಬರೆದು ಕಳುಹಿಸುವಂತೆ ದೇಶದ ಜನರಿಗೆ ಪ್ರಧಾನಿ ಕರೆ ನೀಡಿದ್ದಾರೆ.

ನರೇಂದ್ರ ಮೋದಿ ಮೊಬೈಲ್ ಆಯಪ್, MyGov.in ಮತ್ತು ಆಲ್ ಇಂಡಿಯಾ ರೇಡಿಯೋ ಮೂಲಕ ಜನರು ಸೈನಿಕರಿಗೆ ಸಂದೇಶವನ್ನು ಕಳುಹಿಸಬಹುದಾಗಿದೆ. #Sandesh2Soldiers ಎಂದು ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಹಬ್ಬದ ಸಂದರ್ಭದಲ್ಲಿಯೂ ತಮ್ಮ ಕುಟುಂಬದಿಂದ ದೂರವಿದ್ದುಕೊಂಡು ದೇಶ ರಕ್ಷಣೆ ಮಾಡುತ್ತಿರುವ ಧೀರ ಯೋಧರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಅವರ ಜತೆಯೂ ಖುಷಿ ಹಂಚಿಕೊಳ್ಳಿ. ಅವರ ಜತೆ ನಾವಿದ್ದೇವೆ ಎಂದು ಅನುಭೂತಿಯನ್ನು ನೀಡಿ ಎಂದು ಪ್ರಧಾನಿ ದೇಶದ ಜನರಿಗೆ ನೀಡಿದ ಸಂದೇಶದಲ್ಲಿ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin