ದೀಪಿಕಾ, ಅಲಿಯಾಗೆ ಸೆಡ್ಡುಹೊಡೆಯಲಿದ್ದಾಳೆ ಸೆಕ್ಸ್ ಬಾಂಬ್ ಸನ್ನಿ

ಈ ಸುದ್ದಿಯನ್ನು ಶೇರ್ ಮಾಡಿ

Sunny-Leon--01

ಸದಾ ಒಂದಿಲ್ಲೊಂದು ಸುದ್ದಿಯ ಸದ್ದು ಮಾಡುತ್ತಿರುವ ಸೆಕ್ಸ್ ಬಾಂಬ್ ಸನ್ನಿ ಲಿಯೋನ್ ಈಗ ಬಾಲಿವುಡ್‍ನ ಹೆವಿವೇಟ್ ನಟಿಮಣಿಗಳಿಗೇ ಸೆಡ್ಡು ಹೊಡೆಯಲು ಸಿದ್ದತೆ ನಡೆಸಿದ್ದಾಳೆ. ಕೆನಡಾದ ಪಾಪ್ ತಾರೆ ಜಸ್ಟಿನ್ ಬೀಬೆರ್ ಮೇ 10ರಂದು ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ತನ್ನ ಚೊಚ್ಚಲ ಸಂಗೀತಗೋಷ್ಠಿ ನಡೆಸಲಿದ್ದು, ಈಗಿನಿಂದಲೇ ತಯಾರಿಗಳು ನಡೆಯುತ್ತಿವೆ. ಈ ಗೋಷ್ಠಿಯನ್ನು ದೊಡ್ಡಮಟ್ಟದಲ್ಲಿ ಯಶಸ್ಸು ಮಾಡಬೇಕೆಂಬ ಉದ್ದೇಶ ಸಂಘಟಕರದ್ದು. ಕಾರ್ಯಕ್ರಮಕ್ಕೆ ಗ್ಲಾಮರ್ ಸ್ಪರ್ಶ ನೀಡಲು ಉದ್ದೇಶಿಸಿರುವ ಪ್ರಾಯೋಜಕರು ಇದನ್ನು ಮ್ಯೂಸಿಕಲ್ ಸ್ಟಾರ್ ನೈಟ್ ಮಾಡಲು ಮುಂದಾಗಿದ್ದಾರೆ. ಈ ಸಂಗೀತ ಕಚೇರಿಯಲ್ಲಿ ಭಾಗವಹಿಸಿ ನೃತ್ಯ ಕಾರ್ಯಕ್ರಮಗಳನ್ನು ನೀಡುವಂತೆ ಬಾಲಿವುಡ್ ಬೆಡಗಿಯರಾದ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮೊದಲಾದವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ.

ಈ ಆಹ್ವಾನವನ್ನು ಸ್ವೀಕರಿಸಿರುವ ಸನ್ನಿ ವೇದಿಕೆಯಲ್ಲಿ ತನ್ನ ಮಾದಕ ಮೈಮಾಟದಿಂದ ಆಕರ್ಷಕ ನೃತ್ಯ ಪ್ರದರ್ಶಿಸುವ ಮೂಲಕ ಡಿಪ್ಪಿ ಮತ್ತು ಆಲಿಯಾಗೆ ಸೆಡ್ಡು ಹೊಡೆಯಲು ತುದಿಗಾಲಲ್ಲಿ ನಿಂತಿದ್ದಾಳೆ. ಸನ್ನಿ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿದ್ದಾಳೆ. ಆಕೆ ಕೆನಡಾ ಪಾಪ್ ಸ್ಟಾರ್ ಜಸ್ಟಿನ್ ಸಂಗೀತ ಗೋಷ್ಠಿಯಲ್ಲಿ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರೆ ಅದು ದೊಡ್ಡ ಮಟ್ಟದಲ್ಲಿ ಯಶಸ್ಸು ಆಗುತ್ತಿದೆ. ಆಕೆಯನ್ನು ನಾವು ಸಂಪರ್ಕಿಸಿ ಈಗಾ ಗಲೇ ಮಾತುಕತೆ ನಡೆಸಿದ್ದೇವೆ. ಆಕೆ ಗ್ರೀನ್ ಸಿಗ್ನಲ್ ನೀಡಿದ್ದಾಳೆ ಎನ್ನುತ್ತಾರೆ ಸಂಘಟಕರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin