ದೀಪಿಕಾ ಜೊತೆ ಅಮೀರ್ ರೊಮ್ಯಾನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

aMEER

ಬಾಲಿವುಡ್ ನೀಳಕಾಯದ ಚೆಲುವೆ ದೀಪಿಕಾ ಪಡುಕೋಣೆ ಮತ್ತು ಪ್ರತಿಭಾವಂತ ನಟ, ನಿರ್ದೇಶಕ ಅಮೀರ್‍ಖಾನ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ..! ಹಾಗೆಂದು ಬಿ-ಟೌನ್‍ನಿಂದ ತೇಲಿ ಬಂದಿದೆ. ಯಶ್‍ರಾಜ್ ಫಿಲ್ಮ್ಸ್ ಬ್ಯಾನರ್‍ನಲ್ಲಿ ನಿರ್ಮಾಣಗೊಳ್ಳಲಿರುವ `ಥಗ್’ ಸಿನಿಮಾದಲ್ಲಿ ಅಮೀರ್ ಮತ್ತು ದೀಪಿಕಾ ಜೊತೆಯಾಗಲಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ಅಂತಿಮ ನಿರ್ಧಾರವಾಗದಿದ್ದರೂ, ಬಾಲಿವುಡ್ ವರದಿಗಳು ಇದನ್ನು ಖಚಿತಪಡಿಸಿವೆ.  ಹಿಂದಿ ಚಿತ್ರರಂಗದ ಈ ಸೂಪರ್ ಜೋಡಿಗಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಅನ್ನೋದು ಚಿತ್ರರಸಿಕರ ಅಪೇಕ್ಷೆ ಆಗಿದೆ. ಈ ಹೊಸ ಪ್ರಾಜೆಕ್ಟ್‍ಗೆ ದೀಪಿಕಾ ಜೊತೆ, ಸೂಪರ್‍ಸ್ಟಾರ್ ಹೃತಿಕ್ ರೋಷನ್ ನಟಿಸಬೇಕಿತ್ತು. ಆದರೆ ಲಾಸ್ಟ್ ಮಿನಿಟ್‍ನಲ್ಲಿ ಆತ ಕೈಕೊಟ್ಟ ನಂತರ ಆ ಸ್ಥಾನಕ್ಕೆ ಅಮೀರ್ ಬಂದಿದ್ದಾನೆ. `ಥಗ್’ಗೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದು, ವಿಜಯ್ ಕೃಷ್ಣ ಆಚಾರ್ಯ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅಮೀರ್-ದೀಪಿಕಾ ರೊಮ್ಯಾನ್ಸ್‍ನನ್ನು ತೆರೆ ಮೇಲೆ ನೋಡಲು ಪಡ್ಡೆಗಳು ಕಾತುರರಾಗಿರುವುದಂತೂ ನಿಜ.

► Follow us on –  Facebook / Twitter  / Google+

Facebook Comments

Sri Raghav

Admin