ದೀಪಿಕಾ ಬಾಲ್ಯದಲ್ಲಿ ಕ್ರೀಡಾ ಪ್ರೇಮಿಯಾಗಿದ್ದಳಂತೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ಪ್ರೌಢ ನಟನಾಕೌಶಲ್ಯದಿಂದ ಚಿತ್ರ ರಸಿಕರ ಹೃದಯ ಗೆದ್ದಿದ್ದಾಳೆ. ಆದರೆ, ಬಾಲ್ಯದಲ್ಲಿ ತನಗೆ ಕ್ರೀಡೆಗಳ ಬಗ್ಗೆ ಹೆಚ್ಚು ಒಲವಿತ್ತು ಎಂಬ ಸಂಗತಿಯನ್ನು ಡಿಪ್ಪಿ ಬಹಿರಂಗಗೊಳಿಸಿದ್ದಾಳೆ. ನಾನು ಶಾಲೆಯಲ್ಲಿ ಓದುತ್ತಿರುವಾಗ ಪಠ್ಯೇತರ ಚಟುವಟಿಕೆಗಳಲ್ಲಿ ನನಗೆ ತುಂಬಾ ಆಸಕ್ತಿ ಇತ್ತು. ಕ್ರೀಡೆಗಳು, ನಾಟಕ ಮತ್ತು ಪ್ರದರ್ಶನಗಳಲ್ಲಿ ನನಗೆ ಆಗ ಇದ್ದಷ್ಟು ಖುಷಿ ಓದಿನಲ್ಲಿ ಇರಲಿಲ್ಲ ಎಂದು ಡಿಪ್ಪಿ ಹೇಳಿಕೊಂಡಿದ್ದಾಳೆ. ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ನಿಕೆಲೋಡಿಯೋನ್ ಕಿಡ್ಸ್ ಅವಾಡ್ರ್ಸ್ ಶೋನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಕ್ಕಳಲ್ಲಿರುವ ಪ್ರತಿಭೆ ಬಗ್ಗೆ ದೀಪಿಕಾ ಮಾತನಾಡಿದಳು. ಈಗಿನ ಮಕ್ಕಳು ತುಂಬಾ ಬುದ್ದಿವಂತರು ಮತ್ತು ಪ್ರತಿಭಾವಂತರು.
ಇಂದಿನ ಮಕ್ಕಳಂತೆ ನಾವು ಆಗ ಪ್ರತಿಭಾನ್ವಿತರಾಗಿರಲಿಲ್ಲ. ಮಿಗಿಲಾಗಿ ಇಂದಿನ ಮಕ್ಕಳಿಗೆ ಸಾಕಷ್ಟು ಅವಕಾಶಗಳಿವೆ. ಜೊತೆ ಅವರು ಪ್ರತಿಭಾವಂತರು ಮತ್ತು ಆತ್ಮವಿಶ್ವಾಸವುಳ್ಳವರು. ಅವರಲ್ಲಿನ ಪ್ರತಿಭೆ ಮತ್ತು ಸಾಮಥ್ರ್ಯ ಬೆರಗು ಮೂಡಿಸುತ್ತದೆ ಎನ್ನುತ್ತಾಳೆ ಡಿಪ್ಪಿ. ಇದೇ ಸಮಾರಂಭದಲ್ಲಿ ಬಾಲಿವುಡ್ ಬಾದ್ಶಾ ಶಾರುಕ್ ಖಾನ್ಗೆ ವರ್ಷದ ಕಿಡ್ಸ್ ಐಕಾನ್ ಪ್ರಶಸ್ತಿ ನೀಡಲಾಯಿತು. ವರುಣ್ ಧವನ್ ಮತ್ತು ಅಲಿಯಾಭಟ್ಗೆ ನಿಕೆಲೋಡಿಯೋನ್ ಚಾಯ್ಸ್ ಪ್ರಶಸ್ತಿ ಗಳನ್ನು ಕೊಡಮಾಡಲಾಯಿತು. ನಟ ಸಲ್ಮಾನ್ಖಾನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download