ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿ : ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

dr--sudhakr-mla

ಹಿರಿಯೂರು, ಅ.26-ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿಕೊಂಡು, ಕಷ್ಟ-ಸುಖ ಏನೇ ಬರಲಿ ಗಂಡ-ಹೆಂಡತಿ ಪರಸ್ಪರ ಅರಿತು ಬಾಳುವ ಮೂಲಕ ದಾಂಪತ್ಯದ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ಶಾಸಕ ಡಿ.ಸುಧಾಕರ್ ತಿಳಿಸಿದರು.ನಗರದಲ್ಲಿ ಸಾಮೂಹಿಕ ವಿವಾಹದ ಮೂಲಕ ದಾಂಪತ್ಯದ ಬದುಕಿಗೆ ಕಾಲಿಟ್ಟಿದ್ದ 12ಜೋಡಿಗಳಿಗೆ ತಲಾ ರೂ. 25 ಸಾವಿರ ವಿತರಿಸಿ ಮಾತನಾಡಿದ ಅವರು, ಬಡವರು ಹಾಗೂ ಮಧ್ಯಮ ವರ್ಗದವರು ಸಾಮೂಹಿಕ ವಿವಾಹದತ್ತ ಮನಸ್ಸು ಮಾಡಿದರೆ, ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಅವರು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಇ.ಮಂಜುನಾಥ್, ತಾ. ಪಂ. ಅಧ್ಯಕ್ಷ ಚಂದ್ರಪ್ಪ, ಖಾದಿ ರಮೇಶ್, ಕಲ್ಲಹಟ್ಟಿ ತಿಪ್ಪೇಸ್ವಾಮಿ, ನಗರಸಭೆ ಸದಸ್ಯರಾದ ಎಸ್.ಪಿ.ಟಿ.ದಾದಾಪೀರ್, ಅಬ್ಬಾಸ್, ಶ್ರೀನಿವಾಸ್, ಪುಷ್ಪಲತಾ ಪುಟ್ಟಣ್ಣ, ಸಾದತ್, ತಿಪ್ಪೇರುದ್ರಣ್ಣ, ರಂಗಸ್ವಾಮಿ, ವೀರೇಶ್, ವೀರನಾಯಕ, ಲೋಕೇಶ್, ಇತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin