ದುಡಿದು ತಿನ್ನುವ ಪ್ರವೃತ್ತಿ ಬೆಳೆದರೆ ದೇಶ ಉದ್ದಾರ : ವಿ.ಆರ್.ವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

vala

ಚಿತ್ರದುರ್ಗ, ಫೆ.3- ಪತ್ರಿಯೊಬ್ಬರು ಜೀವನದಲ್ಲಿ ದುಡಿದು ತಿನ್ನುವ ಪ್ರವೃತ್ತಿ ಬೆಳಸಿಕೊಂಡರೆ ದೇಶ ಉದ್ದಾರವಾಗುತ್ತದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು.
ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ಬೆಳ್ಳಿಹಬ್ಬ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಕಾಯಕ ಮಹತ್ವವನ್ನು ಅರಿತರೆ ಇಡೀ ರಾಷ್ಟ್ರ ಬದಲಾವಣೆಯಾಗುತ್ತದೆ. ಸಮಸ್ತ ಜನರು ಕಷ್ಟಗಳಿಂದ ಮುಕ್ತರಾಗಬೇಕಾದರೆ ದುಡಿದು ತಿನ್ನುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.ಎಲ್ಲಾ ಧರ್ಮದವರು ತಮ್ಮ ತಮ್ಮ ಧರ್ಮದವನ್ನು ಪ್ರೀತಿಸುವುದರೊಂದಿಗೆ ಅನ್ಯ ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಸಾಹಿತ್ಯ, ಸಂಸ್ಕೃತಿ  ಶ್ರೀಮಂತವಾಗಿದೆ.

ನಮ್ಮಲ್ಲಿ ರಾಮಾಯಣ, ಮಹಾಭಾರತ, ಶರಣರ ವಚನಗಳು ಹೀಗೆ ಅನೇಕ ಕೃತಿಗಳು ಬಂದಿವೆ, ಜ್ಞಾನದಿಂದ ಸಮಾಜದ ಬದಲಾವಣೆಯಾಗುತ್ತದೆ. ಶ್ರೀಗಳ ಉತ್ತಮ ಕಾರ್ಯಗಳಿಗೆ ಎಲ್ಲರ ಸಹಕಾರ ಮುಖ್ಯ. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುವುದು ಎಂದು ಹೇಳಿದರು.  ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ, ಡಾ.ಶಿವಮೂರ್ತಿ ಮುರುಘಾ ಶರಣರು ಜಾತಿವಾದ, ಮೂಲಭೂತವಾದ, ಹಿಂಸವಾದ, ಸಂಪ್ರದಾಯವಾದ, ಪಲಾಯನವಾದ ದೇಶದ ಅಭಿವೃದ್ದಿಗೆ ಮಾರಕವಾಗಿವೆ ಎಂದು ಹೇಳಿದರು.ಅತಿವಾದ ಮತ್ತು ಮೂಲಭೂತವಾದಕ್ಕೆ ಹೆಚ್ಚೆನೂ ವ್ಯತ್ಯಾಸವಿಲ್ಲ. ಶರಣರು ಅಹಿಂಸಾವಾದಿಗಳಾಗಿದ್ದು ಬೇರೆಯವರ ಸುಖ-ದುಃಖಗಳನ್ನು ತಮ್ಮ ಸುಖದುಃಖದಂತೆಯೇ ಭಾವಿಸದ್ದರು. ಹಿಂಸೆಗೆ ಹಿಂಸೆ ಪರ್ಯಾಯವಲ್ಲ, ಮಾನವೀಯತೆಯೇ ಧರ್ಮದ ಮೂಲ.

ಧರ್ಮವನ್ನು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಆಚರಿಸುವುದು ಒಳಿತು ಎಂದು ತಿಳಿಸಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ.ಶಿವಮೂರ್ತಿ ಮುರುಘಾ ಶರಣರ ಬೆಳ್ಳಿಹಬ್ಬ ಆಚರಣೆ ಸಮಿತಿಯ ಪಧಾನ ಕಾರ್ಯದರ್ಶಿಗಳಾದ ಶಂಕರ್ ಬಿದರಿ, ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಅರವಿಂದ ಚಂದ್ರಕಾಂತ್‍ಬೆಲ್ಲದ್, ಚಿತ್ರದುರ್ಗ ನಗರಸಭಾಧ್ಯಕ್ಷ ಕಾಂತರಾಜು, ಎಸ್.ಜೆ.ಎಂ.ವಿದ್ಯಾಪೀಠದ ಉಪಾಧ್ಯಕ್ಷರಾದ ಪ್ರೊ.ಎಸ್.ಎಚ್.ಪಟೇಲ, ಕಾರ್ಯದರ್ಶಿಗಳಾದ ಕೆ.ವಿ.ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin