ದುನಿಯಾ ವಿಜಿಗೆ ಇಂದು 43ನೇ ಹುಟ್ಟುಹಬ್ಬ : ಉದಯ್- ಅನಿಲ್ ನೆನೆದು ಕಣ್ಣೀರಿಟ್ಟ ನಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.20- ದುನಿಯಾವಿಜಿ ಇಂದು ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಕನಕ ಚಿತ್ರದ ನಿರ್ದೇಶಕ ಆರ್.ಚಂದ್ರು, ರಂಗಾಯಣರಘು ಸೇರಿದಂತೆ ಚಿತ್ರರಂಗದ ಹಲವು ಸ್ನೇಹಿತರು ಶುಭ ಕೋರಿದರು. ಇದೇ ವೇಳೆ ಮಾಸ್ತಿಗುಡಿ ಚಿತ್ರದ ಟ್ರೇಲರ್ ಸಹ ಬಿಡುಗಡೆ ಮಾಡಲಾಯಿತು. ಪ್ರಾಣ ಸ್ನೇಹಿತರಾಗಿದ್ದ ಉದಯ್ ಮತ್ತು ಅನಿಲ್ ಅವರನ್ನು ಕಳೆದುಕೊಂಡು ನೋವಿನಲ್ಲಿರುವ ಅವರು ಸ್ನೇಹಿತರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದು, ನಂತರ ಅವರ ನೆನಪಿನಾರ್ಥ ಆಟೋ ವಿತರಣೆ ಮಾಡಿದರು.

Duniya-Viji-6

ನಾವು ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದೆವು. ನಾನು ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಸ್ನೇಹಿತರಾಗಿದ್ದು, ಇಂದು ಅವರಿಲ್ಲದೇ ಇರುವುದು ಸಾಕಷ್ಟು ನೋವು ತಂದಿದೆ ಎಂದು ಸ್ಮರಿಸಿದರು. ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಿತ್ರಗಳಲ್ಲಿ ನಟಿಸುತ್ತಿದ್ದ ದುನಿಯಾ ವಿಜಿ ದುನಿಯಾ ಚಿತ್ರದ ಮೂಲಕ ನಾಯಕ ನಟನಾಗಿ ತೆರೆ ಮೇಲೆ ಮಿಂಚಿದವರು.  ನಂತರ ಜಂಗ್ಲಿ, ಕರಿಚಿರತೆ, ದನಕಾಯೋನು, ಜಾನಿಮೇರನಾಮ್, ಚಂಡ ಮತ್ತಿತರ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ವಿಜಯ್ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಕನ್ನಡ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Duniya-Viji-5

Duniya-Viji-1

Duniya-Viji-4

Duniya-Viji-2Duniya-Viji-2

Duniya-Viji-3

Facebook Comments

Sri Raghav

Admin