ದುಬಾರಿ ಬೆಲೆಯ ಮಣಿ ಕೊಂಡುಕೊಳ್ಳಲು ಬಂದವನು ಮಾಡಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Mani--01

ಬೆಂಗಳೂರು, ನ.13-ದುಬಾರಿ ಬೆಲೆಯ ಮಣಿ ಕೊಂಡುಕೊಳ್ಳುವ ನೆಪದಲ್ಲಿ ಮನೆಯೊಂದಕ್ಕೆ ಬಂದ ದರೋಡೆಕೋರರು ಮನೆಯಲ್ಲಿದ್ದ ಇಬ್ಬರಿಗೆ ಚಾಕು ತೋರಿಸಿ ಬೆದರಿಸಿ ಮಣಿ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲೇಶ್ವರಂನ 10ನೆ ಕ್ರಾಸ್‍ನಲ್ಲಿ ಶಶಿಕಾಂತ್ ಎಂಬುವರ ಮನೆ ಇದೆ. ಇವರ ಸ್ನೇಹಿತನ ಬಳಿ ದುಬಾರಿ ಬೆಲೆಯ ಮಣಿ ಇತ್ತು. ಇದನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ಇಬ್ಬರು ದರೋಡೆಕೋರರು ಮಣಿ ಕೊಳ್ಳುವ ನೆಪ ಮಾಡಿಕೊಂಡು ಶನಿವಾರ ಮಧ್ಯಾಹ್ನ ಶಶಿಕಾಂತ್ ಮನೆಗೆ ಬಂದಿದ್ದಾರೆ.

ಶಶಿಕಾಂತ್ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಮಣಿಕೊಳ್ಳುವ ನಾಟಕವಾಡಿ ಇವರಿಬ್ಬರಿಗೂ ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ದುಬಾರಿ ಬೆಲೆಯ ಮಣಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೋಸ ಹೋಗಿದ್ದು ಅರಿತ ಶಶಿಕಾಂತ್ ಈ ಸಂಬಂಧ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.

Facebook Comments

Sri Raghav

Admin