ದುಬೈನಲ್ಲಿ ಗಾಂಧಿ ಪ್ರತಿಮೆ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

Gandhi

ದುಬೈ,ನ.6-ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಇಂದಿಲ್ಲಿ ಅನಾವರಣಗೊಳಿಸಲಾಯಿತು.  ದುಬೈನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಕೌನ್ಸಿಲರ್ ಜನರಲ್ ಅನುರಾಗ್ ಸುಹಾಗ್ ಗಾಂಧಿ ಪ್ರತಿಮೆಯನ್ನು ಅನಾವರಣ ಗೊಳಿಸಿದರು. ಇದರಿಂದ ಅರಬ್ ರಾಷ್ಟ್ರಗಳಲ್ಲಿ ಅನಾವರಣಗೊಂಡ ಗಾಂಧೀಜಿಯವರ ಪ್ರಥಮ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದ ಗಾಂಧಿಭವನದ ವತಿಯಿಂದ ಪ್ರತಿಮೆಯನ್ನು ಮಾಡಿಸಿ ಕಳುಹಿಸಿಕೊಡಲಾಗಿತ್ತು. ವಿಶ್ವದಲ್ಲಿ ಅಶಾಂತಿ ವಾತಾವರಣ ಕಂಡುಬರುತ್ತಿದ್ದರೂ ಭಾರತದಲ್ಲಿ ಮಾತ್ರ ಶಾಂತಿ ಸಂದೇಶ ಸಾರಲಾಗುತ್ತಿದೆ ಎಂದು ಅನುರಾಗ್ ಸುಹಾಗ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವ ಪರ್ಯಟನೆ ಮಾಡುವ ಮೂಲಕ ಗಾಂಧೀಜಿಯವರ ತತ್ವವನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ದುಬೈ ಕನ್ನಡ ಸಂಘದ ವತಿಯಿಂದ ಗಾಂಧಿ ಪ್ರತಿಮೆ ಅನಾವರಣದ ಯೋಜನೆಯನ್ನು ರೂಪಿಸಲಾಗಿತ್ತು.  ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಗಾಂಧಿ ಭವನದ ಕಾರ್ಯದರ್ಶಿ ಶಿವರಾಜ್, ಗಾಂಧಿವಾದಿ ನಾರಾಯಣಸ್ವಾಮಿ, ದುಬೈ ಕನ್ನಡ ಸಂಘದ ಸಂಘಟಕರಾದ ಸದನ್ದಾಸ್ ದೀಪಕ್ ಮತ್ತಿತರರು ಪಾಲ್ಗೊಂಡರು.

► Follow us on –  Facebook / Twitter  / Google+

Facebook Comments

Sri Raghav

Admin