ದುಲೀಪ್ ಟ್ರೋಫಿಗೆ ಪಿಂಕ್ ಚೆಂಡು

ಈ ಸುದ್ದಿಯನ್ನು ಶೇರ್ ಮಾಡಿ

Pinkಬೆಂಗಳೂರು,ಆ.12- ಮುಂಬರಲಿರುವ ಪ್ರತಿಷ್ಠಿತ ದುಲೀಪ್ ಟ್ರೋಫಿ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಪಿಂಕ್ ಬಣ್ಣದ ಚೆಂಡನ್ನು ಹೊನಲು ಬೆಳಕಿನ ಪಂದ್ಯಗಳಲ್ಲಿ ಬಳಸಲಾಗುತ್ತಿದೆ ಎಂದು ಬಿಸಿಸಿಐ ತಿಳಿಸಿದೆ.   ದಿಲೀಪ್ ಟ್ರೋಫಿಯ ಪಂದ್ಯಗಳು ಆ.23ರಿಂದ ಸೆ.4ರ ತನಕ ದೆಹಲಿಯ ಹೊರವಲಯದಲ್ಲಿರುವ ಗ್ರೇಟ್ ನೋಯ್ಡಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಯುವರಾಜ್ ಸಿಂಗ್ ನಾಯಕತ್ವದ ಭಾರತ ರೆಡ್ , ಗೌತಮ್ ಗಂಭೀರ್ ನಾಯಕತ್ವದ ಭಾರತ ಬ್ಲೂ ಹಾಗೂ ಸುರೇಶ್ ರೈ ನಾಯಕತ್ವದ ಭಾರತ ಗ್ರೀನ್ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.

ದುಲೀಪ್ ಟ್ರೋಫಿಯ ಪಂದ್ಯಗಳು ಉತ್ತಮ ದೇಶೀ ಆಟಗಾರರಿಗೆ ವೇದಿಕೆಯಾಗಲಿದ್ದು, ಮುಂಬರಲಿರುವ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗಳ ಹಿನ್ನೆಲೆಯಲ್ಲಿ ಈ ಸರಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.   ದುಲೀಪ್ ಟ್ರೋಫಿ ಮೊದಲ ಪಂದ್ಯ ಭಾರತ ರೆಡ್-ಭಾರತ ಗ್ರೀನ್ ನಡುವೆ ಆ.23ರಿಂದ 26ರವರೆಗೆ. ಎರಡನೇ ಪಂದ್ಯ ಭಾರತ ರೆಡ್-ಭಾರತ ಬ್ಲೂ ನಡುವೆ 29ರಿಂದ ಸೆ.1ರವರೆಗೆ, ಹಾಗೂ ಭಾರತ ಬ್ಲೂ-ಭಾರತ ಗ್ರೀನ್ ನಡುವೆ ಸೆ.4ರಿಂದ 7ರವರೆಗೆ ನಡೆಯಲಿದೆ ಮತ್ತು ಸರಣಿಯ ಫೈನಲ್ ಪಂದ್ಯ ಸೆ.10ರಿಂದ 14ರವರೆಗೆ ನಡೆಯಲಿದೆ.

ತಂಡಗಳ ಇಂತಿವೆ:

ಇಂಡಿಯಾ ರೆಡ್- ಯುವರಾಜ್ ಸಿಂಗ್(ನಾಯಕ), ಅಭಿನವ್ ಮುಕುಂದ್, ಕೆ.ಎಸ್.ಭರತ್, ಸುದೀಪ್ ಚಟರ್ಜಿ, ಅಂಕುಶ್ ಬೈನ್ಸ್ (ವಿ.ಕಿ), ಅರುಣ್ ಕಾರ್ತಿಕ್, ಅಕ್ಷಯ್ ವಕಾರೆ, ನತು ಸಿಂಗ್, ಅನುರಿತ್ ಸಿಂಗ್, ಈಶ್ವರ ಪಾಂಡೆ, ನಿತೀಶ್ ರಾಣ, ಎಂ. ಅಶ್ವಿನ್ ಮತ್ತು ಅಭಿಮನ್ಯು ಮಿಥುನ್. ಇಂಡಿಯಾ ಬ್ಲೂ- ಗೌತಮ್ ಗಂಭೀರ್(ನಾಯಕ), ಮಯಾಂಕ್ ಅಗ್ರವಾಲ್, ಶೆಲ್ಡೌನ್ ಜಾಕ್ಸನ್, ಬಾಬಾ ಅಪರಿಜಿತ್, ಸಿದ್ದೇಶ್ ಲಾಡ್, ದಿನೇಶ್ ಕಾರ್ತಿಕ್(ವಿ.ಕಿ.), ಪರ್ವೇಜ್ ರಸೋಲ್, ಕೆ.ಮೋನಿಶ್, ಕೃಷ್ಣದಾಸ್, ಪಂಕಜ್ ಸಿಂಗ್, ಸೂರ್ಯ ಕುಮಾರ್ ಯಾದವ್, ಮೋಹಿತ್ ಶರ್ಮ, ಶಾರ್ದೋಲ್ ಠಾಕೂರ್, ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ.
ಭಾರತ ಗ್ರೀನ್- ಸುರೇಶ್ ರೈನ(ನಾಯಕ), ರಾಬಿನ್ ಉತ್ತಪ್ಪ , ಜಲಜ್ ಸಕ್ಸೇನಾ, ಅಂಬಾ.ಟಿ ರಾಯ್ಡು, ಇಯಾನ್ ದೇವ್‍ಸಿಂಗ್, ರೋಹನ್ ಪ್ರೇಮ್, ಪಾರ್ಥೀವ್ ಪಟೇಲ್(ವಿ.ಕಿ) ಹರಭಜನ್ ಸಿಂಗ್, ಶ್ರೇಯಸ್ ಗೋಪಾಲ್, ಅಶೋಕ್ ದಿಂಡ, ಸಂದೀಪ್ ಶರ್ಮ, ಅಂಕಿತ್ ರಜಪೂತ್, ರಜತ್ ಪಲಿವಾಲ್, ಜಸ್ಪ್ರೀತ್ ಬುಮ್ರಾ ಹಾಗೂ ಮುರುಳಿ ವಿಜಯ್ ತಂಡದಲ್ಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin