ದುಷ್ಕರ್ಮಿಗಳ ಗುಂಡಿಗೆ ಬಲಿಯಾಯ್ತು ಉದ್ಯಮಿ ಕುಟುಂಬ

ಈ ಸುದ್ದಿಯನ್ನು ಶೇರ್ ಮಾಡಿ

Firing--0Family

ಸೀತಾಪುರ(ಉ.ಪ್ರ), ಜೂ. 7- ಅಪರಿಚಿತ ದುಷ್ಕರ್ಮಿಗಳು ಉದ್ಯಮಿಯೊಬ್ಬರ ಇಡೀ ಕುಟುಂಬವನ್ನು ಗುಂಡಿಟ್ಟು ಹತ್ಯೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಸೀತಾಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.  60 ವರ್ಷದ ಸುನೀಲ್ ಜೈಸ್ವಾಲ್ ಮತ್ತು ಅವರ ಮಗ 25ರ ಹರೆಯದ ರಿತಿಕ್ ಇಬ್ಬರೂ ರಾತ್ರಿ ಮನೆಗೆ ಬಂದು ಇನ್ನೇನು ಮನೆಯೊಳಕ್ಕೆ ಹೋಗಬೇನ್ನುವಷ್ಟರಲ್ಲಿ ಎರಡು ಮೋಟಾರ್ ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ತೀರಾ ಸಮೀಪದಿಂದ ಇಬ್ಬರಿಗೂ ಗುಂಡಿಕ್ಕಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಬಂದೂಕಿನಲ್ಲಿ ಗುಂಡು ಹಾರಿದ ಶಬ್ದ ಕೇಳಿ ಜೈಸ್ವಾಲ್ ಅವರ ಪತ್ನಿ ಒಳಗಿನಿಂದ ಅಂಗಳಕ್ಕೆ ಓಡಿ ಬಂದಿದ್ದಾರೆ. ಅವರು ಹೊರಕ್ಕೆ ಬಂದ ಕೂಡಲೆ ಹಂತಕರು ಅವರ ಮೇಲೂ ಕುಂಡು ಹಾರಿಸಿದರು.ಜೈಸ್ವಾಲ್ ಮತ್ತು ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇನ್ನೂ ಜೀವ ಹಿಡಿದಿದ್ದ ಪುತ್ರ ರಿತಿಕ್‍ನನ್ನು ನೆರೆಹೊರೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದು. ಅಲ್ಲಿ ರಿತಿಕ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಕೊಲೆಗಾರರು ಗುಂಡು ಹಾರಿಸುವಾಗ ಅಪ್ಪ ಮಗನ ರಕ್ಷಣೆಗೆ ಧಾವಿಸಿದ ನೆರೆಮನೆಯ ವ್ಯಕ್ತಿಯ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಬೇಟೆಗೆ ಮುಂದಾಗಿದ್ದಾರೆ. ಈ ಕೊಲೆಯ ಕಾರಣ ತಿಳಿದು ಬಂದಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin