ದೂರದೃಷ್ಟಿ-ಬದ್ಧತೆ ಇಲ್ಲದ ಭಾಷಣ : ಎಚ್.ಡಿ.ಕುಮಾರಸ್ವಾಮಿ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು,ಫೆ.6-ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಿ.ಆರ್.ವಾಲಾ ಮಾಡಿದ ಭಾಷಣ ಅತ್ಯಂತ ಕಳಪೆಯದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.   ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದೂರದೃಷ್ಟಿ ಇಲ್ಲದ, ಬದ್ಧತೆ ಇಲ್ಲದ ಹೊಸ ಕಾರ್ಯಕ್ರಮವಿಲ್ಲದ ಭಾಷಣವಾಗಿದೆ. ಮೂರು ವರ್ಷಗಳ ಕಾಲ ಕಾಲಹರಣ ಮಾಡಿದ್ದು , ಮುಂದಿನ ಒಂದು ವರ್ಷಗಳಾದರೂ ಕಾರ್ಯಕ್ರಮಗಳನ್ನು ರೂಪಿಸಬೇಕಿತ್ತು. ಅದೂ ಆಗಿಲ್ಲ. ನೀರಾವರಿ, ರೈತರ ಬಗ್ಗೆಯಾಗಲಿ, ನಂಜುಂಡಪ್ಪ ವರದಿ ಅನುಷ್ಠಾನವಾಗಲಿ, ಹೈ-ಕರ್ನಾಟಕ ಭಾಗದ ವಿಶೇಷ ಅನುದಾನದ ಬಗ್ಗೆಯಾಗಲಿ ಸಮಂಜಸವಾದ ಕಾರ್ಯಕ್ರಮವನ್ನು ಪ್ರಸ್ತಾಪಿಸಿಲ್ಲ ಎಂದು ಆರೋಪಿಸಿದರು.

ಹೈದರಾಬಾದ್‍ಕರ್ನಾಟಕದ ವಿಶೇ ಷ ಸ್ಥಾನಮಾನಕ್ಕಾಗಿ ನಾಲ್ಕು ಸಾವಿರ ಕೋಟಿ ರೂ. ಇಟ್ಟಿದ್ದೇವೆ ಎಂದು ಹೇಳಿದ್ದಾರೆಯೇ ಹೊರತು ಖರ್ಚು ಮಾಡಿರುವುದಾಗಿ ಹೇಳಲಿಲ್ಲ. ಪಾರದರ್ಶಕ ಆಡಳಿತ ಮಾಡುತ್ತೇವೆ ಎಂದು ಎಸಿಬಿ ರಚನೆ ಮಾಡಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹ ಮಾಡಿದ್ದಾರೆಂದು ವ್ಯಂಗ್ಯವಾಡಿದರು.   ಆರೋಗ್ಯ ಸಚಿವ ರಮೇಶ್‍ಕುಮರ್ ಅವರು ಮೂರು ವರ್ಷಗಳ ಕಾ ಸರ್ಕಾರ ನಿದ್ರಾವಸ್ಥೆಯಲ್ಲಿತ್ತು ಎಂದು ಹೇಳಿದ್ದಾರೆ. ಸಚಿವರೇ ಹಾಗೆ ಹೇಳಿದ ಮೇಲೆ ನಾವು ಟೀಕಿಸಲು ಏನು ಉಳಿದಿದೆ. ಇಂತಹ ಹೇಳಿಕೆಗಾದರೂ ಮುಖ್ಯಮಂತ್ರಿಯವರು ಲಗಾಮು ಹಾಕಬೇಡವೆ ಎಂದು ಪ್ರಶ್ನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin