ದೂರವಾಣಿ ಕರೆ ಮಾಡಿ ಸರ್ಕಾರಿ ಅಧಿಕಾರಿಗಳನ್ನು ಯಮಾರಿಸುತ್ತಿದ್ದ ನಕಲಿ ಎಸಿಬಿಗಳ ಬಂಧನ
ಚಿಕ್ಕಬಳ್ಳಾಪುರ, ಜ.22-ರಾಜ್ಯದ ವಿವಿಧ ಕಡೆಗಳಲ್ಲಿನ ಇಲಾಖೆಗಳಿಗೆ ದೂರವಾಣಿ ಕರೆ ಮಾಡಿ ಎಸಿಬಿ ಅಧಿಕಾರಿ ಕಾನ್ಸ್ಟೆಬಲ್ಗಳೆಂದು ಹೇಳಿಕೊಂಡು ಬೆದರಿಸುತ್ತಿದ್ದ ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನು ಚಿಕ್ಕಬಳ್ಳಾಪುರ ನಂದಿಗಿರಿ ಧಾಮ ಪೊಲೀಸರು ಬಲೆಗೆ ಕೆಡವಿದ್ದಾರೆ. ಸೇವೆಯಿಂದ ವಜಾಗೊಂಡಿರುವ ಪೇದೆ ಮುರುಗಮ್ಮ ನಿಂಗಪ್ಪ ಕುಂಬಾರ್, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಅಬುಬೂಕರ್, ಬಿಹಾರ ಮೂಲದ ಅಮರ್ಸಿಂಗ್ ಬಂಧಿತ ಖತರ್ನಾಕ್ಗಳು. ಕೊಲೆ ಪ್ರಕರಣ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಮಂಗಳೂರಿನ ಜೈಲಿನಲ್ಲಿ ಕಂಬಿ ಎಣಿಸಿ ಖುಲಾಸೆಗೊಂಡ ನಂತರ ನಕಲಿ ಎಸಿಬಿ ಅಧಿಕಾರಿಗಳಾಗಿ ಹಣ ಗಳಿಕೆಗೆ ಈ ಮೂವರು ಮುಂದಾಗಿದ್ದರು. ಬೆಳಗಾಂ, ಬನಶಂಕರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ದೂರು ದಾಖಲಾಗಿದೆ. ಹಲವರಿಗೆ ದೂರವಾಣಿ ಕರೆ ಮಾಡಿ ಎಸಿಬಿ ಅಧಿಕಾರಿಗಳೆಂದು ಹೇಳಿ ಹೆದರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದರು. ಅಸಲಿ ಎಸಿಬಿಗಳಿಗಿಂತ ಈ ನಕಲಿ ಎಸಿಬಿಗಳೇ ಅಧಿಕಾರಿಗಳನ್ನು ಯಮಾರಿಸುತ್ತಿದ್ದರು. ಈಗ ಪೊಲೀಸರ ಅತಿಥಿಯಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS