ದೆವ್ವದ ಕಾಟದಿಂದ ಪತ್ನಿ, ಪುತ್ರನೊಂದಿಗೆ ಮನೆಬಿಟ್ಟು ಬ್ರೆಜಿಲ್ ಅಧ್ಯಕ್ಷ ಪರಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

Ghost--01

ರಿಯೊ ಡಿ ಜನೈರೋ, ಬ್ರೆಜಿಲ್, ಮಾ.12-ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮೆರ್ ಅವರಿಗೆ ದೆವ್ವ ಕಾಟ ಕೊಡುತ್ತಿದೆಯೇ? ಭೂತ ಚೇಷ್ಟೆಯ ರಾದ್ಧಾಂತವನ್ನು ಸಾಂಬಾ ನಾಡಿದ ಅಧ್ಯಕ್ಷರೇ ಬಹಿರಂಗಗೊಳಿಸುವ ಮೂಲಕ ದೇಶದ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಪಿಶಾಚಿಯ ಭಯದಿಂದಾಗಿ ಅವರು ತಮ್ಮ ಮಾಜಿ ಬ್ಯೂಟಿ ಕ್ವೀನ್ ಪತ್ನಿ ಮತ್ತು ಏಳು ವರ್ಷದ ಪುತ್ರನೊಂದಿಗೆ ಅಧಿಕೃತ ನಿವಾಸ ತೊರೆದಿದ್ದಾರೆ.   ಬ್ರಸಿಲಿಯಾದ ಅಲ್ವಾರಾಡಾ ಪ್ಯಾಲೆಸ್‍ನಲ್ಲಿ (ಅಧ್ಯಕ್ಷರ ನಿವಾಸ) ಕೆಟ್ಟ ಘಟನೆಗಳು ನಡೆಯುತ್ತಿವೆ. ಅಲ್ಲಿ ದೆವ್ವಗಳ ಕಾಟದಿಂದ ತಾವು ಕುಟುಂಬ ಸಮೇತ ಉಪಾಧ್ಯಕ್ಷರ ನಿವಾಸಕ್ಕೆ ಸ್ಥಳಾಂತರಗೊಂಡಿರುವುದಾಗಿ ಬ್ರೆಜಿಲ್ ಅಧ್ಯಕ್ಷರು ಹೇಳಿದ್ದಾರೆಂದು ವಾರ್ತಾ ಸಂಸ್ಥೆಯೊಂದು ವರದಿ ಮಾಡಿದೆ.

ಅಲ್ವೋರಾಡಾ (ಮುಸ್ಸಂಜೆ ಎಂದರ್ಥ) ಅರಮನೆಯನ್ನು ಬ್ರೆಜಿಲ್‍ನ ಖ್ಯಾತ ವಾಸ್ತುಶಿಲ್ಪಿ ಆಸ್ಕರ್ ನೈಮೆರ್ ವಿನ್ಯಾಸಗೊಳಿಸಿದ್ದಾರೆ. ಅನೇಕರು ಇದನ್ನು ಕನಸಿನಲ್ಲೂ ಊಹಿಸಿಕೊಳ್ಳಲು ಸಾಧ್ಯವಾಗದಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬೃಹತ್ ಕೊಳ, ಫುಟ್ಬಾಲ್ ಮೈದಾನ, ದೊಡ್ಡ ಸಭಾಂಗಣ, ವೈದ್ಯಕೀಯ ಕೇಂದ್ರ ಮತ್ತು ಬೃಹತ್ ಹುಲ್ಲಿನ ಹಾಸು ಇದೆ.   ಈ ಬೃಹತ್ ಬಂಗಲೆಯಲ್ಲಿ 76 ವರ್ಷದ ಟೇಮರ್ ಮತ್ತು 33 ವರ್ಷದ ಪತ್ನಿ ಮಾರ್ಸೆಲಾ ಅವರಿಗೆ ಭೂತ ಚೇಷ್ಟೆಯ ಅನುಭವವಾಗಿದೆಯಂತೆ.

ಅಲ್ಲಿ ಯಾವುದೋ ವಿಚಿತ್ರ ಪ್ರಾಣಿಗಳು ಓಡಾಡಿದಂತೆ ಭಾಸವಾಗುತ್ತದೆ. ಊಹಿಸಲಾಗದ ಸಂಗತಿಗಳು ನಡೆಯುತ್ತಿವೆ. ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಲು ಆಗುತ್ತಿಲ್ಲ ಎಂದು ಟೇಮರ್ ಹೇಳಿದ್ದಾರೆ. ಪತ್ನಿಗೂ ಇದೇ ರೀತಿಯ ಅನುಭವವಾಗಿದೆ. ಆದರೆ ಮಗ ಮೈಕೆಲ್ ಜಿನೋಗೆ ಯಾವ ತೊಂದರೆಯೂ ಆಗಿಲ್ಲ. ದೊಡ್ಡ ಬಂಗಲೆಯಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಾನೆ ಎಂದು ದಂಪತಿ ಹೇಳಿರುವುದನ್ನು ವೆಜಾ ವಾರ್ತಾ ಸಂಸ್ಥೆ ಉಲ್ಲೇಖಿಸಿದೆ.   ಭೂತೋಚ್ಚಾಟನೆಗಾಗಿ ನಡೆದ ಪ್ರಯತ್ನಗಳು ವಿಫಲವಾಗಿವೆ. ಹೀಗಾಗಿ ಅರಮನೆಯಲ್ಲಿ ನಡೆಯುತ್ತಿರುವ ವಿಲಕ್ಷಣ ವಿದ್ಯಮಾನಗಳಿಂದ ಹೆದರಿ ನಾವು ಅಲ್ಲಿಂದ ಹೊರಬಂದು ಉಪಾಧ್ಯಕ್ಷರ ಅಧಿಕೃತ ನಿವಾಸ ಜುಬುರು ಪ್ಯಾಲೆಸ್‍ನಲ್ಲಿ ಆಶ್ರಯ ಪಡೆದಿದ್ದಾಗಿ ತಿಳಿಸಿದ್ದಾರೆ.   ಬ್ರೆಜಿಲ್ ಅಧ್ಯಕ್ಷರ ಭೂತಚೇಷ್ಟೆ ಕಾಟದ ಹೇಳಿಕೆಗಳ ಬಗ್ಗೆ ಪರ-ವಿರೋಧ ಮತ್ತು ವ್ಯಂಗ್ಯದ ಹೇಳಿಕೆಗಳು ಕೇಳಿಬರುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin