ದೆಹಲಿಯನ್ನು ಲಂಡನ್ ಮಾಡ್ತಾರಂತೆ ಕೇಜ್ರಿವಾಲ್..!

ಈ ಸುದ್ದಿಯನ್ನು ಶೇರ್ ಮಾಡಿ

Arvind-Kejriwal--01

ನವದೆಹಲಿ, ಮಾ.6-ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಮ್ ಆದ್ಮಿ ಪಾರ್ಟಿ (ಎಎಪಿ) ಅಧಿಕಾರಕ್ಕೆ ಬಂದರೆ ರಾಜಧಾನಿ ನವದೆಹಲಿಯನ್ನು ಲಂಡನ್ ಮಾದರಿಯಲ್ಲಿ ಸೃಷ್ಟಿಸುವುದಾಗಿ ಪಕ್ಷದ ಪರಮೋಚ್ಛ ನಾಯಕರೂ ಆಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ನಗರಸಭೆ ಚುನಾವಣೆಗಳಿಗಾಗಿ ಉತ್ತಮ್‍ನಗರದಲ್ಲಿ ನಡೆಸಿದ ಪ್ರಚಾರದ ವೇಳೆ ಮಾತನಾಡಿದ ಅವರು, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ 15 ವರ್ಷಗಳಲ್ಲಿ ಮಾಡಿದ ಕೆಲಸವನ್ನು ಎಎಪಿ ಕೇವಲ ಎರಡನೇ ವರ್ಷಗಳಲ್ಲಿ ಮಾಡಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀವು ನಮಗೆ 67 ಸ್ಥಾನಗಳನ್ನು ನೀಡಿದೀರಿ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬೇರೆ ಯಾವ ಪಕ್ಷಕ್ಕೂ ಅವಕಾಶ ಇಲ್ಲದಂತೆ ಎಲ್ಲ ಸ್ಥಾನಗಳಲ್ಲೂ ತಮ್ಮ ಪಕ್ಷವನ್ನು ಗೆಲ್ಲಿಸಿಕೊಡಬೇಕೆಂದು ಮತದಾರರಲ್ಲಿ ಅವರು ಮನವಿ ಮಾಡಿದರು.   ಈ ಚುನಾವಣೆಯಲ್ಲಿ ನಾವು ಜಯಗಳಿಸಿದ್ದೇ ಆದರೆ ಇನ್ನೊಂದು ವರ್ಷದಲ್ಲಿ ದೆಹಲಿ ಲಂಡನ್ ಮಾದರಿಯಲ್ಲಿ ಪರಿವರ್ತನೆಯಾಗಲಿದೆ ಎಂದು ಅರವಿಂದ್ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin