ದೆಹಲಿಯಲ್ಲಿದ್ದಾರೆ ಅತಿ ಹೆಚ್ಚು ಪತ್ನಿ ಪೀಡಕರು..!

ಈ ಸುದ್ದಿಯನ್ನು ಶೇರ್ ಮಾಡಿ

Wife--02

ನವದೆಹಲಿ, ಡಿ.4-ಹಲವು ಕುಖ್ಯಾತಿಗಳಿಗೆ ಪಾತ್ರವಾಗಿರುವ ರಾಜಧಾನಿ ನವದೆಹಲಿಗೆ ಮತ್ತೊಂದು ಕಳಂಕ ಅಂಟಿಕೊಂಡಿದೆ. ದೇಶದಲ್ಲಿ ವಿವಾಹಿತೆಯರ ಮೇಲೆ ಗಂಡಂದಿರಿಂದ ನಡೆಯುವ ಕ್ರೂರ ಹಿಂಸಾಕೃತ್ಯಗಳಲ್ಲಿ ದೆಹಲಿ ನಂಬರ್ 1 ಸ್ಥಾನದಲ್ಲಿದೆ. ಪತ್ನಿ ಪೀಡಕರ ಪಟ್ಟಿಯಲ್ಲಿ ಹೈದರಾಬಾದ್ ಮತ್ತು ಜೈಪುರ ನಂತರದ ಶ್ರೇಯಾಂಕದಲ್ಲಿದೆ.  ಅತ್ಯಾಚಾರಗಳ ರಾಜಧಾನಿ ಎಂಬ ಕುಖ್ಯಾತಿ ಗಳಿಸಿರುವ ದೆಹಲಿ ವಿವಾಹಿತ ಸ್ತ್ರೀಯರಿಗೆ ಸುರಕ್ಷಿತವಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (ನ್ಯಾಷನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೋ-ಎನ್‍ಸಿಆರ್‍ಬಿ) ಇತ್ತೀಚಿಗೆ ಬಿಡುಗಡೆ ಮಾಡಿದ ಕಳೆದ ವರ್ಷದ ಅಪರಾಧ ಕೃತ್ಯಗಳ ಅಂಕಿ ಅಂಶಗಳು ಈ ಸಂಗತಿಯನ್ನು ತಿಳಿಸಿವೆ.

ಗಂಡಂದಿರು ಅಥವಾ ಅವರ ಸಂಬಂಧಿಗಳಿಂದ ಮಹಿಳೆಯರ ಮೇಲೆ ನಡೆಯುವ ಕ್ರೂರ ಹಿಂಸೆ. ಪರಿಶಿಷ್ಟ ಜಾತಿಗಳ ಮೇಲೆ ಎಸಲಾಗುವ ದೌರ್ಜನ್ಯ, ಆರ್ಥಿಕ ಅಪರಾಧಗಳು, ಸೈಬರ್ ಕ್ರೈಂ ಮತ್ತು ವಾಹನಗಳ ಕಳವು ಪ್ರಕರಣಗಳಲ್ಲಿ ರಾಜಧಾನಿ ದೆಹಲಿ, ಮುತ್ತಿನ ನಗರಿ ಹೈದರಾಬಾದ್ ಮತ್ತು ಗುಲಾಬಿ ನಗರ ಜೈಪುರ್ ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ.

ಕಳೆದ ವರ್ಷ ವರದಿಯ ಪ್ರಕಾರ ಪತ್ನಿ ಪೀಡನೆಯ ಒಟ್ಟು 12,218 ಪ್ರಕರಣಗಳಲ್ಲಿ ದೆಹಲಿಯಲ್ಲಿ 3,645 ಕೇಸುಗಳು ದಾಖಲಾಗಿವೆ. ಹೈದರಾಬಾದ್‍ನಲ್ಲಿ 1,311 ಹಾಗೂ ಜೈಪುರದಲ್ಲಿ 1,008 ಕೃತ್ಯಗಳು ನಡೆದಿವೆ.  ವಾಹನಗಳ ಕಳ್ಳತನ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 5,843 ಕೇಸುಗಳು ವರದಿಯಾಗಿವೆ.

Facebook Comments

Sri Raghav

Admin