ದೆಹಲಿಯಲ್ಲಿ ಉಜ್ಬೆಕಿಸ್ತಾನದ ಮಹಿಳೆ ಮೇಲೆ ಗ್ಯಾಂಗ್ ರೇಪ್ : ಮಾಜಿ ಪ್ರಿಯಕರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Delhi-Rape--01

ನವದೆಹಲಿ, ಮಾ.16-ದೇಶದ ವಿವಿಧೆಡೆ ವಿದೇಶಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡುತ್ತಿರುವಾಗಲೇ ರಾಜಧಾನಿ ದೆಹಲಿಯಲ್ಲಿ ಉಜ್ಬೆಕಿಸ್ತಾನದ 36 ವರ್ಷ ಮಹಿಳೆಗೆ ಥಳಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ದಕ್ಷಿಣ ದೆಹಲಿಯ ಮಸೂದ್‍ಪುರ್ ಏರಿಯಾದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಮಾಜಿ ಪ್ರಿಯಕರ ಅನುಭವ್ ಯಾದವ್ ಮತ್ತು ಸ್ನೇಹಿತರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಉಜ್ಬೆಕ್ ಮಹಿಳೆ ಕಳದ ಆರು ತಿಂಗಳಿಂದ ದೆಹಲಿ ಫ್ಲಾಟ್‍ನಲ್ಲಿ ನೆಲೆಸಿದ್ದರು. ಆಕೆಗೆ ಸಾಮಾಜಿಕ ಜಾಲತಾಣದ ಮೂಲಕ ನಾಲ್ಕು ಅನುಭವ್ ಯಾದವ್ ಪರಿಚಯವಾಗಿತ್ತು. ಈ ಹಿಂದೆ ಗುಜರಾತ್‍ನ ಸೂರತ್‍ನಲ್ಲಿದ್ದ ಈಕೆ ದೆಹಲಿಗೆ ಬಂದ ನಂತರ ಇವರಿಬ್ಬರು ಪರಸ್ಪರ ಸಂಧಿಸುತ್ತಿದ್ದರು. ಆದರೆ, ಅನುಭವ್‍ನ ದುಷ್ಟ ಗುಣಗಳಿಂದಾಗಿ ಆಕೆ ಆತನ ಗೆಳೆತನ ಬಿಟ್ಟಿದ್ದರು. ಅಲ್ಲದೇ ಅನುಭವ್‍ನ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ.

ಇದರಿಂದ ಕುಪಿತನಾದ ಅನುಭವ್ ಮತ್ತು ಆತನ ಗೆಳೆಯ ಗೌರವ್ ಭಾಟಿಯಾ ಹಾಗೂ ಇನ್ನೂ ಮೂವರು ಮಾರ್ಚ್ 9ರಂದು ರಾತ್ರಿ ಆಕೆಯ ಅಪಾರ್ಟ್‍ಮೆಂಟ್‍ಗೆ ನುಗ್ಗಿ ಆಕೆ ಮೇಲೆ ಹಲ್ಲೆ ನಡೆಸಿದರು. ಪ್ರಜ್ಞಾಶೂನ್ಯರಾದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು.   ಆರಂಭದಲ್ಲಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೆದರಿದ್ದ ಆಕೆ ನಂತರ ನಡೆದ ಸಂಗತಿಯನ್ನು ತಿಳಿಸಿದ್ದಳು. ಈ ಸಂಬಂಧ ಅನುಭವ್ ಮತ್ತು ಆತನ ಸ್ನೇಹಿತರನ್ನು ಬಂಧಿಸಲಾಗಿದೆ.

ಐರಿಷ್ ಮಹಿಳೆ ಕೊಲೆ-ರೌಡಿಶೀಟರ್ ಸೆರೆ :

ಕರಾವಳಿ ರಾಜ್ಯ ಗೋವಾದ ಕಾನಕೋನಾ ಕಡಲ ಕಿನಾರೆಯಲ್ಲಿ ನಡೆದ ಐರಿಷ್ ಮಹಿಳೆ ಕೊಲೆ ಪ್ರಕರಣದ ಸಂಬಂಧ ಸ್ಥಳೀಯ ರೌಡಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin